More

    ಗ್ರಾಮೀಣ ಭಾಗಕ್ಕೆ ರಾತ್ರಿ ವಸ್ತಿ ಬಸ್ ಬಿಡಿ; ಫೋನ್ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರ ಮನವಿ

    ಹೊಸಪೇಟೆ: ಶಾಲಾ, ಕಾಲೇಜುಗಳು ಆರಂಭವಾಗಿದ್ದು, ಗ್ರಾಮೀಣ ಭಾಗದಿಂದ ಬೆಳಗಿನ ಜಾವ ಪಟ್ಟಣಕ್ಕೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ವಸ್ತಿ ಬಸ್‌ಗಳನ್ನು ಆರಂಭಿಸುವಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಮನವಿ ಮಾಡಿದರು.

    ನಗರದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗದಿಂದ ಕುಂದು ಕೊರತೆ ಆಲಿಕೆಗಾಗಿ ಬುಧವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಕರೆ ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯರ ಬಳಿ ಸಮಸ್ಯೆ ಹೇಳಿಕೊಂಡರು.

    ತಾಲೂಕಿನ ಕಡ್ಡಿರಾಂಪುರ ಗ್ರಾಮದ ಶ್ರೀಕಾಂತ ಎಂಬುವರು ಕರೆ ಮಾಡಿ, ಗ್ರಾಮಕ್ಕೆ ಹೊಸಪೇಟೆಯಿಂದ ರಾತ್ರಿ 7 ಗಂಟೆಗೆ ಬಸ್ ಸಂಚಾರ ಆರಂಭಿಸುವಂತೆ ಮನವಿ ಮಾಡಿದರು. ಹಂಪಿಯಿಂದ ಕೊಟ್ರೇಶ್ ಎಂಬುವರು ಕರೆ ಮಾಡಿ, ವಸ್ತಿ ಬಸ್ ಆರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಯಂತ್ರಣಾಧಿಕಾರಿ ಸೀನಯ್ಯ, ಜಿಲ್ಲಾಡಳಿತದ ಮಾರ್ಗಸೂಚಿ ಪರಾಮರ್ಶಿಸಿ ನೈಟ್ ಹಾಲ್ಟ್ ಬಸ್ ಆರಂಭಿಸಲಾಗುವುದು ಎಂದು ತಿಳಿಸಿದರು.

    ಹರಪನಹಳ್ಳಿ ತಾಲೂಕಿನ ಅರಸಿಕೆರೆಯಿಂದ ಗುರುಪ್ರಸಾದ್ ಕರೆ ಮಾಡಿ, ಹರಪನಹಳ್ಳಿಯಿಂದ ಉಚ್ಚಂಗಿ ದುರ್ಗದ ಮಾರ್ಗವಾಗಿ ಬಸ್ ಓಡಿಸುವಂತೆ ಮನವಿ ಮಾಡಿದರು. ಬೆಳಗ್ಗೆ 11 ರಿಂದ 12 ಗಂಟೆವರೆಗೆ ನಡೆದ ಫೋನ್ ಇನ್‌ಗೆ ಒಟ್ಟು 24 ಕರೆಗಳು ಬಂದವು. ವಿಭಾಗೀಯ ನಿಯಂತ್ರಣಾಧಿಕಾರಿ ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆ ಆಲಿಸಿ, ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts