More

    ಗಣಿಬಾಧಿತರ ಕಲ್ಯಾಣಕ್ಕೆ ಕೆಎಂಇಆರ್‌ಸಿ ಹಣ ಬಳಸಿ

    ಹೊಸಪೇಟೆ: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ವಿಕಾಸಕ್ಕಾಗಿ ಕೆಎಂಇಆರ್‌ಸಿಯ 25 ಸಾವಿರ ಕೋಟಿ ರೂ. ನಿಧಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಈ ಹಣ ಬಳಸಕೂಡದು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್. ಆ‌ರ್.ಹಿರೇಮಠ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕೆಎಂಇಆರ್‌ಸಿ ಅಧ್ಯಕ್ಷೆ ಶಾಲಿನಿ ರಜನೀಶ್ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಧೋರಣೆಯಿಂದ ಹಲವು ಅಧಿಕಾರಿಗಳು ಬೇಸತ್ತಿದ್ದಾರೆ. ಕೆಎಂಇಆರ್‌ಸಿ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಕೆಎಂಇಆರ್‌ಸಿಯಲ್ಲಿ ಯಾವುದೇ ವ್ಯತ್ಯಾಸ ಉಂಟಾದರೆ ಅದರ ಮೇಲುಸ್ತುವಾರಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಇದನ್ನು ಶಾಲಿನಿ ರಜನೀಶ್ ಮರೆಯಬಾರದು. ಈಗಾಗಲೇ ಶಾಲಿನಿ ಅವರನ್ನು ಬದಲಿಸಲು ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಅಕ್ರಮ ಗಣಿಗಾರಿಕೆ ಸಮಯದಲ್ಲಿ 4 ಜಿಲ್ಲೆಗಳ 283 ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಅನಾರೋಗ್ಯ, ಅಪೌಷ್ಟಿಕತೆಯಿಂದ ಜನರು ಬಳಲುತ್ತಿದ್ದಾರೆ. ಪರಿಸರ ಹಾಳಾಗಿದೆ. ಪರಿಸರ ಪುನಶ್ಚತನಕ್ಕಾಗಿ ಸುಪ್ರೀಂಕೋರ್ಟ್ ಕೆಎಂಇಆರ್‌ಸಿ ಸ್ಥಾಪಿಸಿದೆ. ಅದರ ನಿಧಿಯನ್ನು ಗಣಿಬಾಧಿತ ಪ್ರದೇಶಗಳ ಜನರ ಜೀವನ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು. ಆದರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧಿಕಾರಿ ಕೆಎಂಇಆರ್‌ಸಿ ಯೋಜನೆ ಬಗ್ಗೆಯೇ ಸರಿಯಾಗಿ ತಿಳಿದುಕೊಂಡಿಲ್ಲ. ಬಳ್ಳಾರಿ ನಗರ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬಳ್ಳಾರಿ ಗ್ರಾಮೀಣ, ಸಂಡೂರು, ಹೊಸಪೇಟೆ ತಾಲೂಕು ಮಾತ್ರ ಅರ್ಹವಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕು ಕೂಡ ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಆಶ್ರಯ ಮನೆಗಳ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದರು.

    ಕೆಎಂಇಆರ್‌ಸಿ ನಿಧಿ ಬಳಕೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಬರುವುದಿಲ್ಲ. ಡಿಎಂಎಫ್ ನಿಧಿಯೇ ಬೇರೆ ಕೆಎಂಇಆರ್‌ಸಿ ನಿಧಿಯೇ ಬೇರೆ. ಈ ಬಗ್ಗೆ ಜಿಲ್ಲಾಧಿಕಾರಿ ತಿಳಿಸಬೇಕು. ತುಮಕೂರಿನ ಗುಬ್ಬಿಯಲ್ಲಿ ಕಮಿಷನ್ ಗೋಸ್ಕರ ಅಲ್ಲಿನ ಶಾಸಕರು ಹಾಗೂ ಗುತ್ತಿಗೆದಾರನ ನಡುವೆ ಜಗಳವಾಗಿದೆ ಎಂದರು.

    ಪ್ರಮುಖರಾದ ಶ್ರೀಶೈಲ ಅಲ್ಲಳ್ಳಿ, ಟಿ.ಎಂ.ಶಿವಕುಮಾರ, ಸೈಯದ್ ಹೈದ‌ರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts