More

    ಎಂ.ಪಿ.ಪ್ರಕಾಶ ರಂಗಮಂದಿರ ನವೀಕರಣಕ್ಕೆ ಒತ್ತಾಯ

    ಹೊಸಪೇಟೆ: ಇಲ್ಲಿನ ನಗರಸಭೆ ಆವರಣದಲ್ಲಿರುವ ಮಾಜಿ ಡಿಸಿಎಂ ದಿ.ಎಂ.ಪಿ.ಪ್ರಕಾಶ ಕಲಾಮಂದಿರ ನವೀಕರಣಗೊಳಿಸಬೇಕು. ಸಂಗೀತ ಶಿಕ್ಷಕರ ನೇಮಕ ಮಾಡಿಕೊಳ್ಳುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿ ವಿಜಯನಗರ ಕಲಾವಿದರ ವೇದಿಕೆ ಸದಸ್ಯರು ಸೋಮವಾರ ಶಾಸಕ ಎಚ್.ಆರ್.ಗವಿಯಪ್ಪಗೆ ಮನವಿ ಸಲ್ಲಿಸಿದರು.

    ಎಂ.ಪಿ.ಪ್ರಕಾಶ ಅವರು ಈ ಭಾಗದಲ್ಲಿ ಸಂಗೀತ, ಸಾಹಿತ್ಯ ಮತ್ತು ಕಲೆಯ ರಾಯಭಾರಿಯಂತಿದ್ದರು. ಹೀಗಾಗಿ ಅವರ ಹೆಸರಲ್ಲಿ ಹೊಸಪೇಟೆ ನಗರಸಭೆ ಆವರಣದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ಆದರೆ, ತಾಂತ್ರಿಕ ತೊಂದರೆಯಿಂದ ಕೆಲ ವರ್ಷಗಳಿಂದ ಮುಚ್ಚಿದೆ. ಅದನ್ನು ನವೀಕರಣಗೊಳಿಸಿದರೆ, ಈ ಭಾಗದ ಅನೇಕ ರಂಗಭೂಮಿ, ಸಂಗೀತ ಹಾಗೂ ಕಲಾವಿದರಿಗೆ ಅನುಕೂಲವಾಗುತ್ತದೆ.

    ಅಲ್ಲದೆ, ಕಳೆದ 15 ವರ್ಷಗಳಿಂದ ಸರ್ಕಾರ ಸಂಗೀತ, ನಾಟಕ ಹಾಗೂ ಚಿತ್ರಕಲೆ ಶಿಕ್ಷಕರ ನೇಮಕಾತಿ ನಡೆಸಿಲ್ಲ. ಆಯಾ ವಿಷಯದ ಪದವೀಧರರು ನಿರುದ್ಯೋಗ ಸಮಸ್ಯೆ ಎದುರಿಸುವ ಜತೆಗೆ ವಯೋಮಿತಿ ಮುಗಿಯುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಶಿಕ್ಷಕರ ನೇಮಕಾತಿ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಅನುರಾಧಾ ವಾಲ್ಮೀಕಿ, ಎಂ.ವಸಂತ, ಯಲ್ಲಪ್ಪ ಭಂಡಾರಿ, ಪೂಜಾರಿ ದುರ್ಗೇಶ್, ಕಾವ್ಯ ಬಾಯಿ, ರೇಣುಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts