More

    ಹಾಲುಮತಸ್ಥರಿಗೆ ಸಿಗದ ಕೈ ಟಿಕೆಟ್, ಧರ್ಮದರ್ಶಿ ಕುರಿ ಶಿವಮೂರ್ತಿ ಬೇಸರ

    ಹೊಸಪೇಟೆ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಳ್ಳಾರಿ ಅಥವಾ ಹರಪನಹಳ್ಳಿ ಕ್ಷೇತ್ರದಲ್ಲಿ ಕುರುಬರಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿ ಕುರಿ ಶಿವಮೂರ್ತಿ ಒತ್ತಾಯಿಸಿದ್ದಾರೆ.

    ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಿದೆ. ಆದರೆ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 4.70 ಲಕ್ಷ ಕುರುಬರಿದ್ದಾರೆ. ಈ ಪೈಕಿ ಶೇ.70 ಕುರುಬ ಸಮಾಜದವರು ಕಾಂಗ್ರೆಸ್ ಬೆಂಬಲಿಸುತ್ತಾರೆ. ಆದರೂ, ಕುರುಬ ಸಮಾಜವನ್ನು ಕಡೆಗಣಿಸಿರುವುದು ಸರಿಯಲ್ಲ ಎಂದರು.

    ಹರಪನಹಳ್ಳಿ ಕ್ಷೇತ್ರದಲ್ಲಿ ಪರಶುರಾಮಪ್ಪ, ವಿಜಯನಗರ ಕ್ಷೇತ್ರದಲ್ಲಿ ರಾಜಶೇಖರ ಹಿಟ್ನಾಳ್, ಕುರಿಶಿವಮೂರ್ತಿ, ಕೆ.ಎಸ್.ಎಲ್.ಸ್ವಾಮಿ, ಎಲ್. ಸಿದ್ದನಗೌಡ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕಮಾಂಡ್ ಕುರುಬರನ್ನು ನಿರ್ಲಕ್ಷ್ಯ ಮಾಡಿದ್ದು, ಅನ್ಯಾಯವಾಗಿದೆ. ಉಳಿದೆರಡು ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಆದ್ಯತೆ ಮೇರೆಗೆ ಟಿಕೆಟ್ ನೀಡಬೇಕು. ಇದೇ ರೀತಿ ಮುಂದುವರಿದರೆ ತಾಲೂಕುವಾರು ಸಭೆ ನಡೆಸಿ ಮುಂದಿನ ನಡೆ ನಿರ್ಧರಿಸಲಾಗುವುದು ಎಂದರು.

    ಕುರುಬ ಸಮಾಜವನ್ನು ಬರೀ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಆದರೆ, ಸ್ಥಳೀಯವಾಗಿ ಕಾಂಗ್ರೆಸ್‌ನಲ್ಲಿ ಕುರುಬ ಸಮಾಜವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

    ಸಂಘದ ಗೌರವಾಧ್ಯಕ್ಷ ಅಯ್ಯಳಿ ಮೂರ್ತಿ, ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ ಕೊಪ್ಪಳ ಒಂದರಲ್ಲಿ ಮಾತ್ರ ಕುರುಬರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಕಡೆಗಣಿಸಲಾಗಿದೆ. 1983ರಲ್ಲಿ ಜಿ. ಶಂಕರಗೌಡರಿಗೆ ಕೊಟ್ಟ ನಂತರ ಉಭಯ ಜಿಲ್ಲೆಯಲ್ಲಿ ಒಮ್ಮೆಯೂ ಟಿಕೆಟ್ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸಂಘದ ನಿರ್ದೇಶಕರಾದ ಬುಡ್ಡಿ ಬಸವರಾಜ, ಗೋಪಾಲ, ತಾಯಪ್ಪ, ಪರಮೇಶ್ವರಪ್ಪ, ಯಮನೂರು ಮೇಟಿ, ಕೆ.ಎಸ್.ಮಲಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts