More

    ಆರ್ಥಿಕ ನೆರವಿಗೆ ಬಾಡಿ ಬಿಲ್ಡರ್ ಮನವಿ

    ಹೊಸಪೇಟೆ: ಜರ್ಮನಿಯಲ್ಲಿ ಮುಂದಿನ ನವೆಂಬರ್‌ನಲ್ಲಿ ಆಯೋಜಿಸಿರುವ ‘ಮಿಸ್ಟರ್ ಯುನಿವರ್ಸ್ ಬಾಡಿ ಬಿಲ್ಡರ್’ ಚಾಂಪಿಯನ್ ಷಿಪ್‌ಗೆ ಆಯ್ಕೆಯಾಗಿದ್ದು, ಆರ್ಥಿಕ ಮುಗ್ಗಟ್ಟು ಎದುರಾಗಿದೆ. ದಾನಿಗಳು, ಕ್ರೀಡಾಭಿಮಾನಿಗಳು ನೆರವಾಗಬೇಕು ಎಂದು ‘ಭಾರತ ಶ್ರೀ’ ಪ್ರಶಸ್ತಿ ಪುರಸ್ಕೃತ ಬಾಡಿ ಬಿಲ್ಡರ್ ಮಾರುತಿ ಬಿ. ಮನವಿ ಮಾಡಿದ್ದಾರೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಡರ್ಸ್‌ ಫೆಡರೇಷನ್ ವತಿಯಿಂದ ಸೆ.4 ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ 70ನೇ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನದೊಂದಿಗೆ ‘ಭಾರತ ಶ್ರೀ’ ಪ್ರಶಸ್ತಿ ಲಭಿಸಿದೆ. ಅದರ ಆಧಾರದ ಮೇಲೆ ಜರ್ಮನಿಯಲ್ಲಿ ನಡೆಯಲಿರುವ ‘ಮಿಸ್ಟರ್ ಯೂನಿವರ್ಸ್’ಗೆ ಆಯ್ಕೆಯಾಗಿದ್ದಾಗಿ ತಿಳಿಸಿದರು.

    ಈ ಹಿಂದೆ ಒಂಬತ್ತು ಬಾರಿ ಮಿಸ್ಟರ್ ಕರ್ನಾಟಕ ಮತ್ತು ಎಂಟು ಬಾರಿ ಮಿಸ್ಟರ್ ಹೈದರಾಬಾದ್ ಕರ್ನಾಟಕ ಪ್ರಶಸ್ತಿಗಳು ಬಂದಿವೆ. ಈಗ ಭಾರತದಿಂದ ಜರ್ಮನಿಗೆ ಹೋಗಿ ಬರಲು ಸುಮಾರು ಮೂರು ಲಕ್ಷ ರೂ. ವೆಚ್ಚವಾಗಲಿದೆ. ನಾನು ನಗರದಲ್ಲಿ ಸಣ್ಣದೊಂದು ಜಿಮ್ ಇಟ್ಟುಕೊಂಡು ಉಪ ಜೀವನ ನಡೆಸುತ್ತಿದ್ದೇನೆ. ದಾನಿಗಳು, ಕ್ರೀಡಾಭಿಮಾನಿಗಳು ಸಹಾಯ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯನಗರ ಜಿಲ್ಲೆಗೆ ಕೀರ್ತಿ ತರುವುದಾಗಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವ ಬಾಡಿ ಬಿಲ್ಡರ್ಸ್‌ಗಳಾದ ಪ್ರಕಾಶ ಎಚ್., ಉಮೇಶ ಗುಜ್ಜಲ, ಮಂಜುನಾಥ ರಾಥೋಡ, ಕೃಷ್ಣ ಹೇಮಂತ ಉಪಸ್ಥಿತರಿದ್ದರು. ನೆರವು ನೀಡಲಿಚ್ಛಿಸುವವರು ಮಾರುತಿ ಅವರ ಫೋನ್ ನಂಬರ್ 72598 25982 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts