More

    ಹಂಪಿಯಲ್ಲಿ ಇಲ್ಲ ಹೋಳಿ ಸಂಭ್ರಮ: ಮೊದಲ ಸಲ ಸ್ಥಳೀಯರೊಂದಿಗೆ ವಿದೇಶಿಗರ ರಂಗಿನಾಟವಿಲ್ಲ

    ಹೊಸಪೇಟೆ: ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೋಳಿ ಆಚರಣೆಗೆ ಸರ್ಕಾರ ನಿಷೇಧ ಹೇರಿದ್ದರಿಂದ ಹಂಪಿಯಲ್ಲಿ ಸ್ಥಳೀಯರೊಂದಿಗೆ ವಿದೇಶಿಗರ ಬಣ್ಣದಾಟಕ್ಕೆ ಬ್ರೇಕ್ ಬಿದ್ದಿದೆ.

    ಪ್ರತಿವರ್ಷ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮುಖ್ಯಗೋಪುರದ ಮುಂಭಾಗದಲ್ಲಿ ಸ್ಥಳೀಯರೊಂದಿಗೆ ಸೇರಿ ವಿದೇಶಿಗರು ಬಣ್ಣದಲ್ಲಿ ಮಿಂದೇಳುತ್ತಿದ್ದರು. ಮಾರ್ಚ್‌ನಲ್ಲಿ ದೇಶ, ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಹೋಳಿ ಆಚರಣೆಗೆಂದೇ ಹೊರ ದೇಶಗಳಿಂದ ಬರುತ್ತಿದ್ದರು. ಹೋಳಿ ಮುಗಿದ ಬಳಿಕ ಗೋವಾ, ಗೋಕರ್ಣ ಸೇರಿ ಇತರ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದರು. ಮೊದಲ ಬಾರಿಗೆ ಹೋಳಿ ಆಚರಣೆಯಲ್ಲಿ ಪಾಲ್ಗೊಂಡವರ ಮುಖದಲ್ಲಿ ಸಂಭ್ರಮ ಮನೆ ಮಾಡಿರುತ್ತಿತ್ತು. ಕಾಮದಹನದ ವೇಳೆ ಕುಣಿದು ಕುಪ್ಪಳಿಸುತ್ತಿದ್ದರು.

    ಕಳೆದ ವರ್ಷವೂ ರಂಗಿನಾಟ ಆಚರಿಸಲಾಗಿತ್ತು. ಅದಾದ ನಂತರ ಕರೊನಾ ವಕ್ಕರಿಸಿತು. ಹೀಗಾಗಿ ಹಂಪಿಗೆ ಬರುವ ವಿದೇಶಿಗರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲದೆ ಈ ಬಾರಿ ಕರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಕೆ ಕ್ರಮವಾಗಿ ಸಾರ್ವಜನಿಕವಾಗಿ ಓಕುಳಿ ಆಡಲು ಸರ್ಕಾರ ನಿರ್ಬಂಧಿಸಿದೆ. ಹೀಗಾಗಿ ಹಂಪಿಯಲ್ಲಿ ಹೋಳಿ ಸಂಭ್ರಮ ಕಂಡುಬರುತ್ತಿಲ್ಲ. ಸ್ಥಳೀಯ ಯುವ ಸಮೂಹದಲ್ಲೂ ಬೇಸರ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts