More

    ಸೇತುವೆಗೆ ಸಾರ್ವಕರ್ ಹೆಸರು ಶತಸಿದ್ಧ

    ಹೊಸದುರ್ಗ: ಯಲಹಂಕ ಮೇಲ್ಸೇತುವೆಗೆ ವೀರ ಸಾರ್ವಕರ್ ಹೆಸರಿಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದರು.

    ಇಲ್ಲಿನ ಪ್ರವಾಸಿಮಂದಿರ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸೇನೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ದೇಶಪ್ರೇಮಿ ವೀರ ಸಾರ್ವಕರ್ ಅವರನ್ನು ಪ್ರಾದೇಶಿಕತೆಯ ದೃಷ್ಟಿಯಲ್ಲಿ ವಿರೋಧಿಸುವುದು ಸರಿಯಲ್ಲ. ರಾಷ್ಟ್ರೀಯತೆ ಹಾಗೂ ಪ್ರಾದೇಶಿಕ ಅಭಿಮಾನ ಒಟ್ಟಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಗಾಂಧಿ ಕುಟುಂಬದ ಹೆಸರನ್ನು ಪ್ರಮುಖ ಸ್ಥಳಗಳಿಗೆ ಇಟ್ಟಾಗ ಎದುರಾಗದ ಪ್ರಾದೇಶಿಕ ಸಮಸ್ಯೆ ಸಾರ್ವಕರ್ ಹೆಸರಿಗೆ ಸೃಷ್ಟಿಯಾಗಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರಿಸಿದರು.

    ಬೆಂಗಳೂರು ಮಹಾನಗರಪಾಲಿಕೆಯ ಅನುಮತಿ ಪಡೆದೆ ಯಲಹಂಕ ಮೇಲ್ಸೇತುವೆಗೆ ಸಾರ್ವಕರ್ ಹೆಸರಿಡುತ್ತೇವೆ. ವಿರೋಧವಿದ್ದರು ಬಂದು ತಡೆಯಲಿ ಎಂದು ಸವಾಲು ಹಾಕಿದರು.

    ಕನ್ನಡದ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ನಡೆಯುವ ಹೋರಾಟದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳದೆ ಕನ್ನಡದ ಕುರಿತು ಬದ್ಧತೆ ಪ್ರದರ್ಶಿಸಲಾಗುವುದು ಎಂದರು.

    ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು. ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶರತ್, ಹೇರೂರು ಮಂಜುನಾಥ್, ಪಂಪ, ಕೀರ್ತಿಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts