More

    ಸಚಿವ ಸಂಪುಟದಿಂದ ಶಿವಾನಂದಗೆ ಕೈ ಬಿಡಿ

    ಹೊಸಪೇಟೆ: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳ್ಳಿಸಬೇಕು ಎಂದು ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಯುಕ್ತ  ಹೋರಾಟ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಿದರು.

    ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ, ಬಾರುಕೋಲು ಚಾಟಿ ಏಟು ಮುಟ್ಟಿಸುವ ಮೂಲಕ ತಹಸೀಲ್ ಕಚೇರಿ ವರೆಗೆ ಪ್ರತಿಭಟನ ರ‍್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದರು.

    ಇದನ್ನೂ ಓದಿ: ವಿಜಯನಗರದಲ್ಲಿ ಸತೀಶ್ ಜಾರಕಿಹೊಳಿಗೆ ಬೆಂಬಲಿಗರಿಂದ ಸ್ವಾಗತ

    ಬರಗಾಲದ ಬವಣೆಯ ಸಂಕಷ್ಟದಲ್ಲಿ ರೈತರು ಕಾಲ ಕಳೆಯುತ್ತಿದ್ದು ಬೆಳೆ ಸರಿಯಾಗಿ ಬಾರದೇ ಜೀವನ ಸಾಗಿಸಲು ಕಷ್ಟಕರವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆಯಾಗದೆ ಬರಗಾಲ ಆವರಿಸಿ ಬೆಳೆ ಸಾಲ ತುಂಬಲಾಗದೆ ದಿಕ್ಕು ತೋಚದಂತಾಗಿದೆ. ದೇಶಕ್ಕೆ ಅನ್ನ ನೀಡುವ ರೈತ ಮಳೆ ಚೆನ್ನಾಗಿ ಸುರಿದು ಉತ್ತಮ ಪಸಲು ಬರಲಿ ಎಂದು ಬಯಸುತ್ತಾರೆಯೇ ಹೊರತು ಬರವನ್ನು ಬಯಸುವುದಿಲ್ಲ ಎಂದು ಆಗ್ರಹಿಸಿದರು.

    ಸಚಿವರಿಗೆ ಬರ ಬಂದಿರಬಹುದು ಅದಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇವರ ಉಡಾಪೆ ಮಾತು ಸಹಿಸಲಾಗದು. ಒಬ್ಬ ರೈತ ವಿರೋಧಿ ರಾಜಕಾರಣಿ ಅಂತವರು ಸಂಪುಟದಲ್ಲಿ ಇರಬಾರದು. ಮುಂದುವರೆಸಿದರೆ ರೈತರ ವಿರುದ್ಧ ಹೇಳಿಕೆ ಕೊಟ್ಟ ಸಚಿವ ಹಾಗೂ  ಸರ್ಕಾರವೂ ಉಳಿದಿಲ್ಲ ಎಂದು ಎಚ್ಚರಿಸಿದರು.

    ಇದನ್ನೂ ಓದಿ: ಭೂಮಿ ಸಾಗುವಳಿ ರೈತರಿಗೆ ಪಟ್ಟಾ ನೀಡಿ

    ಪ್ರಮುಖರಾದ ಜಡೆಯಪ್ಪ, ವೆಂಕಟೇಶ್ವ, ಖಾಜಾಹುಸೇನ್ ನಿಯಾಜಿ, ಜಾಹಿರುದ್ಧೀನ್, ನಾಗರಾಜ, ಪರಶುರಾಮಪ್ಪ  ಸಿದ್ಧಪ್ಪ, ಅಂಕಲೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts