More

    ಭೂಮಿ ಸಾಗುವಳಿ ರೈತರಿಗೆ ಪಟ್ಟಾ ನೀಡಿ

    ಚಿಂಚೋಳಿ: ಕ್ಷೇತ್ರದಲ್ಲಿ ಕಳೆದ ೭೦ ವರ್ಷಗಳಿಂದ ಉಪ ಜೀವನ ಮಾಡುತ್ತಿರುವ ರೈತರಿಗೆ ಭೂಮಿ ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದಿಂದ ಮಂಗಳವಾರ ತಹಸಿಲ್ ಕಚೇರಿ ಮುಂದೆ ಬೃಹರ್ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿತು.

    ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಕ್ಷೇತ್ರದಲ್ಲಿ ದಿನ, ದಲಿತರು, ಬಡ ರೈತರು ಶತಮಾನಗಳಿಂದ ತಮ್ಮ ಉಪ ಜೀವನಕ್ಕಾಗಿ ಉಳಿಮೆ ಮಾಡಿಕೊಂಡು ಜೀವಿಸುತ್ತಿರುವ ಭೂಮಿಯಿಂದ ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ನೀತಿ ಖಂಡಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನಪರ ಹಿತ ಕಾಯುವ ಯೋಜನೆಗಳು ಜಾರಿಗೊಳಿಸಿ ಅನುಷ್ಠಾನಗೊಳಿಸಬೇಕಾದ ಲ್ಯಾಂಡ್ ಗ್ರ್ಯಾಂಟ್ ಕಮಿಟಿ ಭೂ ಮಂಜೂರಾತಿ ನೀಡಿದೆ. ಆದರೆ ಕಳೆದ ೧೭ ವರ್ಷಗಳಿಂದ ವಂಚಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಮೂನೆ ೫೦, ೫೩, ೫೭ ಅರ್ಜಿ ಸಲ್ಲಿದವರಿಗೆ ಪಟ್ಟಾ ನೀಡಬೇಕು. ಸರ್ಕಾರಿ ಸಾಗುವಳಿ ಮಾಡುತ್ತಿರುವ ರೈತರಿಗೆ ಒಕ್ಕಲೆಬ್ಬಿಸುತ್ತಿರುವ ನೀತಿ ಕೈಬಿಡಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.

    ಮಲ್ಲಮ್ಮ ಕೋಡ್ಲಿ, ಜಗದೇವಿ ಚಂದನಕೇರಾ, ತುಳಜಪ್ಪ ರುಸ್ತಂಪುರಕರ, ಖಾಜಮಿಯ್ಯಾ ಇನಾಮದಾರ್, ಪ್ರಭು ಪ್ಯಾರಾಬಧಿ, ಜಾಫರಖಾನ್ ಮಿರಿಯಾಣ, ಸಿದ್ದಾರ್ಥ ಠಾಕೂರ, ಗುರುನಂಜೇಶ್ವರ ಕೋಣಿನ್, ಸಿದ್ದಲಿಂಗಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts