More

    ಕನ್ನಡ ವಿವಿ ನಡೆ ಸಂವಿಧಾನ ವಿರೋಧಿ: ಕಾನೂನುಬದ್ಧ ನೇಮಕಕ್ಕೆ ಡಾ.ಅಂಬೇಡ್ಕರ್ ಸಂಘ ಒತ್ತಾಯ

    ಹೊಸಪೇಟೆ: ಕನ್ನಡ ವಿವಿ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಸಂವಿಧಾನ ವಿರೋಧಿಯಾಗಿದ್ದು, ಕಾನೂನುಬದ್ಧವಾಗಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ವಿವಿ ಕುಲಪತಿ ಸ.ಚಿ.ರಮೇಶ್‌ಗೆ ವಿಜಯನಗರ ಜಿಲ್ಲಾ ಡಾ.ಅಂಬೇಡ್ಕರ್ ಸಂಘದ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು.

    ನೇಮಕಾತಿ ಆದೇಶದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸ್ಥಳೀಯವಾಗಿ ಭೂಮಿ ಕೊಟ್ಟಿರುವ ಕೆಲವರಿಗೆ ಕಾಯಂ ನೇಮಕ ಮಾಡದೆ ತಾರತಮ್ಯ ಧೋರಣೆ ತೋರಲಾಗುತ್ತಿದೆ. ಅಧಿಸೂಚನೆ ಪಟ್ಟಿಯಲ್ಲಿ ಸಾಮಾನ್ಯ, ಪ್ರವರ್ಗ-1 ಒಂದೇ ಒಂದು ಪ.ಜಾ (ವಿಶೇಷಚೇತನ) ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಎಲ್ಲ ನಿಕಾಯಗಳನ್ನು ಒಳಗೊಂಡಂತೆ ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ಸಂವಿಧಾನ ನೀಡಿರುವ ಮತ್ತು ಸರ್ಕಾರಗಳು ಒಪ್ಪಿ ಹೊರಡಿಸಿರುವ ಮೀಸಲಾತಿ ಆದೇಶಗಳನ್ನು ಗಾಳಿಗೆ ತೂರಲಾಗಿದೆ. ಎಲ್ಲ ನಿಕಾಯಗಳಲ್ಲಿಯೂ ಪ್ರತಿ ವೃಂದದ ಹುದ್ದೆಗಳಲ್ಲಿ ಮೀಸಲನ್ನು ಗುರುತಿಸಿ, ನೇಮಕ ಮಾಡಬೇಕು. ಆದರೆ, ಇಲ್ಲಿ ಕರೆದಿರುವ ಒಟ್ಟು 17 ಹುದ್ದೆಗಳಲ್ಲಿ ಕೇವಲ 1 ಹುದ್ದೆಯನ್ನು ಮಾತ್ರ ಎಸ್ಸಿ (ವಿಶೇಷ ಚೇತನರಿ)ಗೆ ಮೀಸಲಿರಿಸಿದೆ. ಸಹ ಪ್ರಾಧ್ಯಾಪಕ ಹುದ್ದೆಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಮಾತ್ರ ಸಾಮಾನ್ಯ ವರ್ಗಕ್ಕೆ 1 ಮಹಿಳಾ ಮೀಸಲನ್ನು ಕಾಯ್ದಿರಿಸಲಾಗಿದೆ ಎಂದರು. ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ 371(ಜೆ) ಅಡಿಯಲ್ಲಿ ಈಗಾಗಲೇ ಒಬ್ಬರನ್ನು ನೇಮಕ ಮಾಡಲಾಗಿದೆ. ಆದರೂ, ಅದೇ ವಿಭಾಗಕ್ಕೆ 1 ಹುದ್ದೆ ಕಾಯ್ದಿರಿಸಲಾಗಿದೆ. ಹಾಗೂ ಮಹಿಳಾ ಮೀಸಲಾತಿಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

    ಪ್ರಗತಿಪರ ಸಂಘಟನೆ ಸಂಚಾಲಕರಾದ ದುರ್ಗಪ್ಪ ಪೂಜಾರಿ, ಸೊಂಪೂರ್ ಮರಿಯಪ್ಪ, ಪ್ರಕಾಶ್, ನೀಲಕಂಠ, ಸಣ್ಣ ಈರಣ್ಣ , ಹುಲುಗಪ್ಪ, ಅಂಜಿನಿ, ಖಾಜಾಹುಸೇನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts