More

    ಅತಿಥಿ ಉಪನ್ಯಾಸಕರೆಲ್ಲರನ್ನೂ ಮುಂದುವರಿಸಿ; ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಒತ್ತಾಯ


    ಹೊಸಪೇಟೆ: ಅತಿಥಿ ಉಪನ್ಯಾಸಕರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಎಲ್ಲರನ್ನೂ ಸೇವೆಯಲ್ಲಿ ಮುಂದುವರಿಸಬೇಕು ಹಾಗೂ ಸೇವಾ ಭದ್ರತೆ ನೀಡಬೇಕೆಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಆಗ್ರಹಿಸಿದರು.

    ಸರ್ಕಾರ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದ ಬಹುಪಾಲು ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗಿದ್ದು, ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ರಾಜ್ಯದಲ್ಲಿ ಎರಡು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕುಮಾರ ನಾಯಕ್ ನೇತೃತ್ವದಲ್ಲಿ ಸರ್ಕಾರವು ಸಮಿತಿ ರಚಿಸಿ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿತ್ತು. ಸಮಿತಿಯ ವರದಿಯನ್ನು ಬಹಿರಂಗಪಡಿಸದೆ, ಕೇವಲ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ದುಪ್ಪಟ್ಟು ಮಾಡುವ ತೀರ್ಮಾನ ತೆಗೆದುಕೊಂಡು ಕಾರ್ಯಭಾರ ಹೆಚ್ಚಿಸಲಾಗಿದೆ. ಹಾಗಾಗಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.

    ಶಿಕ್ಷಣ ತಜ್ಞರು ಅತಿಥಿ ಉಪನ್ಯಾಸಕ ಸಂಘದ ಪ್ರತಿನಿಧಿಗಳನ್ನು ಯೋಜನಾ ಇಲಾಖೆ ಮತ್ತು ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸುವ ಬದಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ಮಂಡಳಿ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಮಾತ್ರ ಬಳಸಿಕೊಂಡು ರಚಿಸಿದ ಸಮಿತಿ ನಿರೀಕ್ಷೆ ಪ್ರಕಾರ ಕೆಲಸ ಮಾಡಿಲ್ಲ. ಆ ಸಮಿತಿ ಅತಿಥಿ ಉಪನ್ಯಾಸಕರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿದರು.

    ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಅತಿಥಿ ಉಪನ್ಯಾಸಕರಾದ ಗಿರೀಶ್, ಸಂದೀಪ್, ಸುಪ್ರಿಯಾ, ಹರ್ಷ, ಡಾ.ಗಾದೆಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts