More

    ಪ್ರತಿ ಜಿಲ್ಲೆಯಲ್ಲಿ ಪಶುಮೇಳ ಆಯೋಜನೆ: ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿಕೆ

    ಹೊಸಪೇಟೆ: ಇಲಾಖೆಗೆ ಆದಾಯ ತರುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಪಶುಲೋಕ ಕಾರ್ಯಕ್ರಮದಡಿ ಪಶುಮೇಳ ಆಯೋಜಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವ ವೃದ್ಧಿಸುವ ಉದ್ದೇಶದೊಂದಿಗೆ ಪಶುಮೇಳ ಆಯೋಜಿಸಲಾಗುವುದು. ಜಾನುವಾರುಗಳ ಎಲ್ಲ ತಳಿಗಳ ಪ್ರದರ್ಶನದ ಇರಲಿದೆ. ಇದರಿಂದ ಆದಾಯವಿಲ್ಲದೆ ಸೊರಗಿರುವ ಇಲಾಖೆಗೆ ಕೊಂಚಮಟ್ಟಿಗೆ ಅನುಕೂಲವಾಗಲಿದೆ. ರೈತರು, ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡುತ್ತಾರೆ. ಅವರಿಗೂ ತಳಿಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಈಗಾಗಲೇ ಬಜೆಟ್‌ನಲ್ಲಿಯೂ ಘೋಷಣೆಯಾಗಿದೆ. ನಾರಿ ಸುವರ್ಣ ತಳಿ ಅಭಿವೃದ್ಧಿ, ನಂದಿ ದುರ್ಗ ಮೇಕೆ ಅಭಿವೃದ್ಧಿ ಯೋಜನೆಯೂ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಪ್ರಾಣಿ ಚಿಕಿತ್ಸೆಗಾಗಿ ಆಯುರ್ವೇದಿಕ್ ಔಷಧಗಳ ಸಂಶೋಧನಾ ಕೇಂದ್ರ ಘೋಷಣೆಯಾಗಿದೆ. ದೇಸಿ ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

    ರಾಜ್ಯಾದ್ಯಂತ ಪಶು ವೈದ್ಯರ ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಿಎಂ ಜತೆ ಚರ್ಚಿಸುವೆ. ಪಶುಸಂಗೋಪನೆ ಇಲಾಖೆ ಅಭಿವೃದ್ಧಿಗೆ ಶ್ರಮಿಸುವಂತೆ ನಿರ್ದೇಶಕರು, ವೈದ್ಯರು, ಸಹಾಯಕ ನಿರ್ದೇಶಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸರಿಯಾದ ಸಮಯಕ್ಕೆ ಕಚೇರಿಗಳಿಗೆ ಹಾಜರಾಗಬೇಕು. ಪಶು ಸಂಜೀವಿನಿ ಸಹಾಯವಾಣಿಗೆ ರೈತರಿಂದ ಕರೆಗಳು ಬಂದರೆ ಶೀಘ್ರ ಸ್ಪಂದಿಸಬೇಕು. ಅಕ್ರಮ ಕಸಾಯಿ ಖಾನೆಗಳು ನಡೆಯುತ್ತಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts