More

    ಪಶು ಸಾಕಣೆಯಿಂದ ಸ್ವಾವಲಂಬನೆ

    ತಲ್ಲೂರ: ಕೃಷಿಕರು ಮಿಶ್ರ ತಳಿ ಹಸುಗಳನ್ನು ಸಾಕುವುದರಿಂದ ಆರ್ಥಿಕವಾಗಿ ಸಬಲವಾಗುವ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿಕ್ಕೆ ಸಾಧ್ಯ ಎಂದು ಯರಗಟ್ಟಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ವಿ. ಪಾಟೀಲ ಹೇಳಿದರು.

    ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಜಿಪಂ, ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಯರಗಟ್ಟಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು,. ಕರುಗಳಿಗೆ ಸಾಕಷ್ಟು ಗಿಣ್ಣದ ಹಾಲು ಕುಡಿಸುವ ಜತೆಗೆ ಸಕಾಲದಲ್ಲಿ ಜಂತುನಾಶಕ ಹಾಕಬೇಕು ಎಂದರು.

    ಸವದತ್ತಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅನಿಲ ಮರಲಿಂಗನವರ ಮಾತನಾಡಿ, ಹೈನುಗಾರಿಕೆಗೆ ಸಾಕಷ್ಟು ಪ್ರೋತ್ಸಾಹ ಧನ ಸರ್ಕಾರದಿಂದ ದೊರೆಯುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಉತ್ತಮ ಕರುಗಳಿಗೆ ಹಾಲಿನ ಕ್ಯಾನ್ ಹಾಗೂ ವಿವಿಧ ಬಹುಮಾನ, ಟಾನಿಕ ಔಷಧ, ಪುಡಿಗಳನ್ನು ವಿತರಿಸಲಾಯಿತು.

    ಗ್ರಾಪಂ ಅಧ್ಯಕ್ಷ ಪ್ರೇಮಾ ಡಮ್ಮಣಗಿ, ಉಪಾಧ್ಯಕ್ಷೆ ಶೋಭಾ ಮಾದರ, ಮುರಗೋಡ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ಬಿ. ಸಜ್ಜನ, ಪಿಡಿಒ ಎಚ್.ಕೆ.ಚೌರಡ್ಡಿ, ಡಾ.ಸಂಗಮೇಶ ಮುನಿಯಪ್ಪನವರ, ಸಂಗ್ರಾಮಗೌಡ ಗೌಡರ, ಎಂ.ಬಿ.ಪಾಶ್ವಾಪುರ, ಎಸ್.ಕೆ.ಪಾಟೀಲ, ಸತೀಶ ಅಂದಾನಿ, ಸೋಮಲಿಂಗಪ್ಪ ಚವಡಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts