More

    ಡೆಮು ರೈಲು ಆರಂಭಿಸಲು ಒತ್ತಾಯ

    ಬಳ್ಳಾರಿ-ದಾವಣಗೆರೆ ನಡುವೆ ಸಂಚಾರ ಅಗತ್ಯ

    ಹೊಸಪೇಟೆ: ಬಳ್ಳಾರಿ-ಹೊಸಪೇಟೆ-ದಾವಣಗೆರೆ ನಡುವೆ ಪ್ರತಿದಿನ ಬೆಳಗ್ಗೆ ಎರಡೂ ಕಡೆಯಿಂದ ಏಕಕಾಲಕ್ಕೆ ಡೆಮು (ಡಿಸೇಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲು ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಾಗೂ ಕಲ್ಯಾಣ ನಗರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿಯಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ದಾವಣಗೆರೆಯು ರಾಜ್ಯದ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ಎರಡು ಜಿಲ್ಲೆಗಳಿಂದ ಬಸ್‌ಗಳಲ್ಲಿ ತೆರಳುತ್ತಾರೆ. ಬೆಳಗಿನ ವೇಳೆ ರೈಲು ಸಂಚಾರ ಇಲ್ಲದ ಕಾರಣ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಾಗುತ್ತದೆ. ಕಡಿಮೆ ವೆಚ್ಚದಲ್ಲಿ ದಾವಣಗೆರೆಗೆ ಹೋಗಲು ಅನುಕೂಲವಾಗುವಂತೆ ಬಳ್ಳಾರಿ-ಹೊಸಪೇಟೆ-ದಾವಣಗೆರೆ ಮಧ್ಯೆ ಡೆಮು ಗಾಡಿ ಆರಂಭಿಸಬೇಕು. ರೈಲು ಆರಂಭದಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳ ಅಭಿವೃದ್ಧಿಗೆ ಅನುಕೂಲವಾಗುವುದಲ್ಲದೆ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ. ಮಧ್ಯ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ವಿವರಿಸಿದರು.

    ಈ ಹಿಂದೆ ಸಂಚರಿಸುತ್ತಿದ್ದ ಹುಬ್ಬಳ್ಳಿ-ತಿರುಪತಿ ಮತ್ತು ಹುಬ್ಬಳ್ಳಿ-ವಿಜಯವಾಡ ರೈಲುಗಳನ್ನು ಮರು ಆರಂಬಿಸಬೇಕು. ಯಶವಂತಪುರ-ವಿಜಯಪುರ ರೈಲುಗಳ ವೇಳೆ ಬದಲಿಸಬೇಕು. ಹೊಸಪೇಟೆ ನಗರದ ಹೊರ ಹೊಲಯದಲ್ಲಿರುವ ಕಲ್ಯಾಣನಗರ ಹಾಗೂ ಚಿತ್ತವಾಡಗಿ ಪ್ರದೇಶದ ನಾಗರಿಕರಿಗೆ ಅನುಕೂಲವಾಗುವಂತೆ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಎದುರು ಅಂಡರ್ ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts