More

    ಸಂಶೋಧನಾರ್ಥಿಗೆ ಧಾರಣಶಕ್ತಿ ಮುಖ್ಯ ಎಂದ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ. ವೀರೇಶ ಬಡಿಗೇರ

    ಹೊಸಪೇಟೆ: ಯುವಸಂಶೋಧಕರು ಮುಖ್ಯವಾಗಿ ಸವಾಲುಗಳನ್ನು ಎದುರಿಸುವ ಮತ್ತು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದರಲ್ಲಿಯೂ ಸಂಶೋಧನಾರ್ಥಿಗೆ ಧಾರಣಶಕ್ತಿ ಅತಿ ಅಗತ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ. ವೀರೇಶ ಬಡಿಗೇರ ಹೇಳಿದರು.

    ತಾಲೂಕಿನ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ರಾಜ್ಯ ಪತ್ರಗಾರ ನಿರ್ದೇಶನಾಲಯ ಕರ್ನಾಟಕ ಸರ್ಕಾರ ಬೆಂಗಳೂರು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಜಯನಗರ ಸಂಶೋಧನೆ : ಸಾಧ್ಯತೆ ಮತ್ತು ಸವಾಲುಗಳು ಕುರಿತ ಎರಡನೇ ದಿನದ ರಾಷ್ಟ್ರೀಯ ಕಾರ್ಯಗಾರದ ಸಮಾರೋಪದಲ್ಲಿ ಮಾತನಾಡಿದರು.

    ಸಂಶೋಧನೆಗೆ ಆಯ್ಕೆ ಮಾಡಿಕೊಂಡ ವಿಷಯ ಅಥವಾ ಶೀರ್ಷಿಕೆಯನ್ನು ಮೊದಲು ಪ್ರೀತಿಸಬೇಕು. ಸರಿಯಾಗಿ ಅರ್ಥಮಾಡಿ ಕೊಳ್ಳಬೇಕು. ಜತೆಗೆ ಬದ್ಧತೆ ಮುಖ್ಯವಾಗಬೇಕು ಅಂದಾಗ ಉತ್ತಮ ಹಾಗೂ ಸಾಮಾಜಿಕ ಉತ್ತರದಾಯಿಯಾದ ಸಂಶೋಧನ ಫಲಿತಗಳನ್ನು ನೀಡಲು ಸಾಧ್ಯ ಎಂದರು.

    ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿ, ಸಂಶೋಧನೆಯ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದರೆ ಅಂತಹ ಪ್ರತಿಯೊಂದು ಕಾರ್ಯಾಗಾರಗಳು ಯಶಸ್ವಿಯಾಗುತ್ತವೆ ಎಂದರು.

    ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ.ಸಿ.ಎಸ್. ವಾಸುದೇವನ್ ಸಮಾರೋಪದ ನುಡಿಗಳನ್ನಾಡಿದರು. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ನಾಯಕ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್. ವೈ. ಸೋಮಶೇಖರ್, ಕನ್ನಡ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗದ ಮುಖ್ಯಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts