More

    ಜೀವನಾನುಭವಗಳ ವ್ಯಕ್ತ ರೂಪವೇ ಸಾಹಿತ್ಯ

    ಗಂಗಾವತಿ: ಸಾಹಿತ್ಯ ಪ್ರಕಾರದ ರಚನೆಗೆ ಅಧ್ಯಯನ ಮುಖ್ಯವಾಗಿದ್ದು, ಲೋಕಾನುಭವಗಳು ಸಾಹಿತ್ಯಕ್ಕೆ ಪ್ರೇರಣೆಯಾಗಲಿವೆ ಎಂದು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

    ನಗರದ ಕಸಾಪ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾನೂನು ಬಿಟ್ಟು ನಡೆದವರ ಕತೆಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಬದುಕಿನ ಅನುಭವಗಳು ಅನುಭಾವದ ನೆಲೆಯಲ್ಲಿ ವ್ಯಕ್ತಗೊಂಡಾಗ ಉತ್ತಮ ಸಾಹಿತ್ಯ ರಚನೆಯಾಗಲಿದೆ. ಜೀವನದ ನೋವು ನಲಿವು, ಸುಖ-ದುಃಖ, ಸಂತಸ, ಸಡಗರ, ದ್ವೇಷ, ಪ್ರೀತಿ, ನೀತಿ, ಅಸೂಯೆಗಳ ವ್ಯಕ್ತ ರೂಪವೇ ಸಾಹಿತ್ಯ. ಸಾಹಿತ್ಯವು ಬದುಕಿನ ಪ್ರತಿಬಿಂಬವಾಗಿದ್ದು, ಅನುಸಂಧಾನ ಮಾಡಿಕೊಳ್ಳುವ ಮೂಲಕ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಬರಹಗಾರರು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಕಸಾಪದಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಕೃತಿ ರಚನೆಗೆ ಪ್ರೇರಣೆ ನೀಡಲಾಗುವುದು ಎಂದರು. ಸಾಹಿತಿ, ಕೃತಿ ರಚನೆಗಾರ ಬಿ.ವಿರುಪಣ್ಣ ಮಾತನಾಡಿದರು.

    ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪವನಕುಮಾರ ಗುಂಡೂರು, ಸಾಹಿತಿ ಪ್ರಾಣೇಶ, ಸುಳೇಕಲ್ ಗ್ರಾಪಂ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಸದಸ್ಯ ಕರಿಯಪ್ಪ ಎಮ್ಮಿ, ಕಸಾಪ ಪದಾಧಿಕಾರಿಗಳಾದ ರಮೇಶ ಕುಲ್ಕರ್ಣಿ, ಶಿವಾನಂದ ತಿಮ್ಮಾಪುರ, ರುದ್ರೇಶ ಆರಾಳ್, ಉಪನ್ಯಾಸಕಿ ಗೀತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts