More

    ಹೊಸಕೋಟೆ ಟೌನ್ ಕೋ ಆಪರೇಟಿವ್ ಬ್ಯಾಂಕ್‌ ಉಪಾಧ್ಯಕ್ಷೆ ಸ್ಥಾನಕ್ಕೆ ಅಲ್ಪಸಂಖ್ಯಾತ ಮಹಿಳೆ ಆಯ್ಕೆ ; ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಎಂದ ಸಚಿವ ಎಂಟಿಬಿ ನಾಗರಾಜ್

    ಬೆಂಗಳೂರು ಗ್ರಾಮಾಂತರ: ಬರೋಬ್ಬರಿ 110 ವರ್ಷದ ಹೊಸಕೋಟೆ ನಗರದ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಯಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶ ಸಾರಿದಂತಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಗರುಡಾಚಾರ್‌ಪಾಳ್ಯದ ಗೃಹಕಚೇರಿಯಲ್ಲಿ ಸೋಮವಾರ ಟೌನ್‌ಬ್ಯಾಂಕ್ ಉಪಾಧ್ಯಕ್ಷೆ ಜೀನತ್ ಉನ್ನೀಸಾ ಹಾಗೂ ಸದಸ್ಯರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿಭೇದವಿಲ್ಲದೆ, ಯಾವ ಸಮುದಾಯವನ್ನೂ ಕಡೆಗಣಿಸದೆ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ತತ್ವದಂತೆ ಟೌನ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾನತೆ ಸಾರಿದಂತಾಗಿದೆ ಎಂದು ಹೇಳಿದರು.

    ಸಚಿವರ ಆಶಯ: ಟೌನ್ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ಎಂಟಿಬಿ ನಾಗರಾಜ್ ಆಶಯದಂತೆ ಎಲ್ಲ ಸಮುದಾಯಕ್ಕೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಅವಿರೋಧವಾಗಿ ಜೀನತ್‌ಉನ್ನೀಸಾ ಅವರನ್ನು ಆಯ್ಕೆ ಮಾಡಲಾಗಿದೆ. ಎಲ್ಲರ ವಿಶ್ವಾಸದೊಂದಿಗೆ ಬ್ಯಾಂಕ್‌ನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಈ ಹಿಂದಿನ ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಲಾಗಿತ್ತು, ಬ್ಯಾಂಕ್ ನಿರ್ದೇಶಕರಾಗಿದ್ದ ಉನ್ನಿಸಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ೋಷಿಸಿದರು ಎಂದು ತಿಳಿಸಿದರು.

    ಮುಖಂಡ ಮೋಹನ್ ಮಾತನಾಡಿ, ಸಾಮಾನ್ಯವಾಗಿ ಬಹುಸಂಖ್ಯಾತರು ಹಾಗೂ ಪ್ರಭಾವಿಗಳಿಗಷ್ಟೇ ಉನ್ನತ ಸ್ಥಾನಕ್ಕೆ ಮಣೆಹಾಕಲಾಗುತ್ತದೆ. ಆದರೆ ಈ ಬ್ಯಾಂಕ್‌ನಲ್ಲಿ ಸಚಿವರ ಆಶಯದಂತೆ ಅಲ್ಪಸಂಖ್ಯಾತ ಮಹಿಳೆಯೊಬ್ಬರಿಗೆ ಉನ್ನತಸ್ಥಾನ ದೊರಕಿಸಿಕೊಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts