More

    ಮಂಗಗಳ ಹಸಿವು ನೀಗಿ ಮಾನವೀಯತೆ ಮೆರೆದ ಶಾಸಕ

    ಹೊಸದುರ್ಗ: ಲಾಕ್ ಡೌನ್ ಕಾರಣ ತಾಲೂಕಿನ ಪುಣ್ಯಕ್ಷೇತ್ರ ಧಶರಥರಾಮೇಶ್ವರ ವಜ್ರಕ್ಕೆ ಬರುವ ಭಕ್ತರ ಸಂಖ್ಯೆ ಕ್ಷೀಣಿಸಿದ ಕಾರಣ ಆಹಾರವಿಲ್ಲದೆ ಪರದಾಡುತ್ತಿದ್ದ ನೂರಾರು ಮಂಗಗಳಿಗೆ ಶಾಸಕ ಗೂಳಿಹಟ್ಟಿ ಶೇಖರ್ ತಿಂಗಳಿಗಾಗುವಷ್ಟು ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹಸಿವಿನಿಂದ ಕಂಗಾಲಾಗಿದ್ದ ಮಂಗಳಿಗೀಗ ನಿತ್ಯ ಬಾಳೆಹಣ್ಣಿನ ಗೊನೆ, ಅಕ್ಕಿ, ಬೆಲ್ಲ, ಗೋದಿ ದೊರೆಯಲಿದೆ. ಒಂದು ತಿಂಗಳ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

    ಮಂಗಗಳಿಗೆ ಆಹಾರದ ಕೊರತೆ ಎದುರಾಗಿದ್ದನ್ನು ವಿಜಯವಾಣಿ ಫೋನ್ ಇನ್ ಕಾರ್ಯ ಕ್ರಮದಲ್ಲಿ ಶನಿವಾರ ವೀರಭದ್ರಸ್ವಾಮಿ ಎಂಬುವರು ಶಾಸಕರ ಗಮನ ಸೆಳೆದಿದ್ದರು.

    ಗುಡ್ಡದ ನೆರಲಕೆರೆಯಿಂದ 5 ಕಿ.ಮಿ ದೂರದ ಅರಣ್ಯ ಪ್ರದೇಶದಲ್ಲಿರುವ ದೇವಾಲಯ ಆವರಣದಲ್ಲಿ ನೂರಾರು ಮಂಗಗಳಿವೆ. ಇಲ್ಲಿಗೆ ಬರುವ ಭಕ್ತರು ದೇವರ ಪೂಜೆಗೆ ಮುನ್ನ ಮಂಗಗಳಿಗೆ ಎಡೆ ಸಲ್ಲಿಸುವ ಸಂಪ್ರದಾಯವಿದೆ.

    ನಿತ್ಯ ಬರುತ್ತಿದ್ದ ಭಕ್ತರು ನೀಡುತ್ತಿದ್ದ ಎಡೆ ಸೇವಿಸಿ ಕೊಳದ ನೀರು ಕುಡಿದು ಮಂಗಗಳು ಹಾಯಾಗಿ ಜೀವಿಸುತ್ತಿದ್ದವು. ಲಾಕ್‌ಡೌನ್ ಕಾರಣ ಕಳೆದೊಂದು ತಿಂಗಳಿಂದ ಆಹಾರದ ಕೊರತೆ ಎದುರಾಗಿತ್ತು.

    ಶ್ರೀಕ್ಷೇತ್ರದೊಂದಿಗೆ ಹೆಚ್ಚಿನ ಒಡನಾಟವಿಟ್ಟುಕೊಂಡಿರುವ ಶಾಸಕ ಗೂಳಿಹಟ್ಟಿ ಡಿ.ಶೇಖರ್ ವಿಷಯ ತಿಳಿದ ಕೂಡಲೇ ಆಹಾರದ ವ್ಯವಸ್ಥೆ ಮಾಡಿ ಪ್ರಾಣಿ ಪ್ರೇಮ ಮೆರೆದರು.

    ಮಂಗಗಳಿಗೆ ಈ ಹಿಂದಿನಂತೆ ಆಹಾರ ದೊರೆಯುವ ತನಕ ಪ್ರತಿದಿನ ಎರಡು ಗೊನೆ ಬಾಳೆ ಹಣ್ಣು, ಸಿಹಿ ಅಡುಗೆ ಸಿದ್ದಪಡಿಸಲು ಅಗತ್ಯವಾದ ಅಕ್ಕಿ, ಬೆಲ್ಲ , ಗೋದಿಯನ್ನು ಸ್ವಂತ ಹಣದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

    ಶನಿವಾರ ಮತ್ತು ಭಾನುವಾರ ಕ್ಷೇತ್ರಕ್ಕೆ ಭೇಟಿ ನೀಡಿ ತಾವೇ ಮಂಗಳಗಳಿಗೆ ಹಣ್ಣು ನೀಡುವ ಮೂಲಕ ಮಾನವಿಯತೆ ತೋರಿದರು.

    ರಾಮಾಯಣದ ನಂಟು: ಶ್ರವಣಕುಮಾರನ ಹತ್ಯೆಯ ದೋಷ ಪರಿಹಾರಕ್ಕೆ ದಶರಥನು ಸ್ಥಾಪಿಸಿ ಪೂಜಿಸಿದ ಶಿವಲಿಂಗಕ್ಕೆ ಲಂಕೆಯಿಂದ ಹಿಂದಿರುಗಿದ ಶ್ರೀರಾಮ ಪೂಜೆ ಸಲ್ಲಿಸಿದನೆಂಬ ಐತಿಹ್ಯದ ಕಾರಣ ಇದು ದಶರಥ ರಾಮೇಶ್ವರ ಎಂದು ಹೆಸರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts