More

    ಹಳ್ಳಿ ಪ್ರತಿಭೆ ಅರಳಿದರೆ ದೇಶ ಪ್ರಗತಿ

    ಹೊಸದುರ್ಗ: ಗ್ರಾಮೀಣ ಪ್ರತಿಭೆಗಳು ಅರಳಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮಕ್ಕಳ ರಾತ್ರಿ ತರಗತಿಗೆ ಚಾಲನೆ ನೀಡಿ ಮಾತನಾಡಿದರು.

    ದೇಶದ ಭವಿಷ್ಯ ಅಡಗಿರುವುದು ಶಾಲಾ ಕೊಠಡಿಗಳಲ್ಲಿ ಎಂಬ ಸತ್ಯ ಎಲ್ಲರೂ ಅರಿತುಕೊಳ್ಳಬೇಕು. ಕಲಿಸುವ ಬದ್ಧತೆ ಶಿಕ್ಷಕರಿಗೆ, ಕಲಿಯುವ ಬದ್ಧತೆ ಮಕ್ಕಳಿಗೆ ಇದ್ದಾಗ ಮಾತ್ರ ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಚಿಂತನೆ ಹೆಚ್ಚಾಗಬೇಕು. ಶ್ರದ್ಧೆ, ಕಠಿಣ ಪರಿಶ್ರಮ ಹಾಗೂ ಆಸಕ್ತಿಯಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.

    ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ನಡುವೆ ಪರಸ್ಪರ ಸಮನ್ವಯ ಸಾಧಿಸುವ ಮೂಲಕ ಮಕ್ಕಳ ಅಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಪರೀಕ್ಷೆಗೆ ಎರಡೇ ತಿಂಗಳಿದ್ದು ಮಕ್ಕಳ ಚಿತ್ತ ಅಭ್ಯಾಸದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಬಿಇಒ ಎಲ್.ಜಯಪ್ಪ ಮಾತನಾಡಿ, ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಪ್ರತಿ ಮಗುವಿನ ಶೈಕ್ಷಣಿಕ ಪ್ರಗತಿ ಮೇಲೆ ಗಮನವಿರಿಸಲಾಗಿದೆ. ರಾತ್ರಿ ತರಗತಿ ನಡೆಸಲಾಗುತ್ತಿದೆ. ಘಟಕ ಪರೀಕ್ಷೆ, ಸತತ ಅಭ್ಯಾಸ ಹಾಗೂ ಕನಿಷ್ಠ ಅಂಕಗಳನ್ನು ಪಡೆಯುವ ವಿಧಾನಗಳನ್ನು ತಿಳಿಸಲಾಗುತ್ತಿದೆ ಎಂದರು.

    ಬಿಆರ್‌ಸಿ ಮೌನೇಶ್, ಅಕ್ಷರ ದಾಸೋಹ ಎಡಿ ಪರಮೇಶ್ವರಪ್ಪ, ಉಪ ಪ್ರಾಚಾರ್ಯ ನಾಗೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts