More

    ಜಲಮೂಲಗಳ ರಕ್ಷಣೆ ಅವಶ್ಯ

    ಹೊಸದುರ್ಗ: ನೈಸರ್ಗಿಕ ಸಂಪತ್ತು ಜಲಮೂಲಗಳ ರಕ್ಷಿಸುವ ಜತೆಗೆ ಅಂತರ್ಜಲ ಮರುಪೂರಣಗೊಳಿಸುವ ಉದ್ದೇಶದಿಂದ ಜಲಾಮೃತ ಯೋಜನೆ ರೂಪಿಸಲಾಗಿದೆ ಎಂದು ಜಿಪಂ ಸಿಇಒ ಸತ್ಯಭಾಮಾ ಹೇಳಿದರು.

    ತಾಲೂಕಿನ ಮತ್ತೋಡು ಗ್ರಾಮದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಲಾಮೃತ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

    ಕೆರೆ, ಕಟ್ಟೆಗಳನ್ನು ಸಂರಕ್ಷಿಸುವುದು ಸಮುದಾಯದ ಜವಾಬ್ದಾರಿ. ಕೆರೆಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದರು.

    ಜಲಾಮೃತ ಯೋಜನೆಯಡಿ ಮತ್ತೋಡು ಹೋಬಳಿಯ ಎರಡು ಕೆರೆಗಳನ್ನು ಗುರುತಿಸಲಾಗಿದೆ. ಮತ್ತೋಡು ಗ್ರಾಮದ ಗಂಗಮ್ಮನ ಹೊಸಕೆರೆ ಅಭಿವೃದ್ಧಿಗೆ 23 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

    ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಕೆರೆಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆ ಉಪಕಾರಿಯಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷ ರಾಮಪ್ಪ, ತಾಪಂ ಇಒ ಜಾನಕೀರಾಮ್, ರವೀಂದ್ರನಾಥ್, ಜಿಪಂ ಎಇಇ ದಿವಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts