More

    ದ್ರಾಕ್ಷಿ ಬೆಳೆ ಪರಿಶೀಲಿಸಿದ ವಿಜ್ಞಾನಿಗಳ ತಂಡ

    ಹೊರ್ತಿ: ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಭಾಗದಲ್ಲಿ ಹಾಳಾದ ದ್ರಾಕ್ಷಿ ಬೆಳೆಗಳ ತೋಟಕ್ಕೆ ಸೋಮವಾರ ತೋಟಗಾರಿಕೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

    ಗೋಡಿಹಾಳ, ಲೋಣಿ(ಬಿ.ಕೆ),ಮಣಂಕಲಗಿ ಗ್ರಾಮಗಳ ರೈತರ ತೋಟಗಳಿಗೆ ತೆರಳಿದ ವಿಜ್ಞಾನಿಗಳ ತಂಡ ಹಾಳಾದ ದ್ರಾಕ್ಷಿ ಬೆಳೆ ಕುರಿತು ರೈತರಿಂದ ಸಮಗ್ರ ವರದಿ ಪಡೆದುಕೊಂಡರು.

    ಬಾಗಲಕೋಟೆ ತೋಟಗಾರಿಕೆ ವಿವಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಕುಲಪತಿ ಹಿಪ್ಪರಗಿ, ಸಹ ಪ್ರಾಧ್ಯಾಪಕ ಡಾ. ಡಿ.ವಿ. ಪೀರಜಾದೆ, ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಅವಟಿ, ಹಿರಿಯ ತೋಟಗಾರಿಕೆ ನಿರ್ದೇಶಕ ರೇವಣಸಿದ್ದ ಹಿರೇಮಠ, ಸಹಾಯಕ ತೋಟಗಾರಿಕೆ ಅಧಿಕಾರಿ ಪರಶುರಾಮ ಬೇನೂರ ತಂಡದಲ್ಲಿದ್ದರು.

    ಅಕಾಲಿಕ ಮಳೆಯಿಂದ ದಾಕ್ಷಿ ಬೆಳೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಸರ್ಕಾರ ವಿಶೇಷ ಪ್ಯಾಕೇಜ್ ಹಾಗೂ ಬೆಳೆ ವಿಮೆ ಬಿಡುಗಡೆಗೊಳಿಸಬೇಕೆಂದು ರೈತರಾದ ಸತೀಶ ತೋಳನೂರ, ಮುಪ್ಪಣ್ಣ ಖೇಡ, ಸಂತೋಷ ಮೇತ್ರೆ, ಶ್ರೀಶೈಲ ಮಾಲಾಬಗಿ ಮನವಿ ಮಾಡಿದರು.

    ರೈತರಾದ ಶಿವಾನಂದ ಬಿರಾದಾರ, ರಾಚು ಪಟ್ಟಣಶೆಟ್ಟಿ, ಕಾಶೀನಾಥ ಕಾಮಗೊಂಡ, ವಿಶ್ವನಾಥ ಬಿರಾದಾರ, ಮಾದು ರಾಯಗೊಂಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts