More

    ಕರೊನಾ ವಾರಿಯರ್ಸ್‌ಗೆ ಅಭಿನಂದನೆ

    ಹೊರ್ತಿ: ಸಮೀಪದ ಜಿಗಜೇವಣಿ ಗಾಮಸ್ಥರು ಭಾನುವಾರ ಗ್ರಾಮದ ಕೌದೇಶ್ವರ ಮಹಾರಾಜರ ಮಠದಿಂದ ಪಾದಯಾತ್ರೆ ಮಾರುಕಟ್ಟೆವರೆಗೆ ತೆರಳಿದ ಕರೊನಾ ವಾರಿಯರ್ಸ್‌ಗಳಿಗೆ ಆರತಿ ಬೆಳಗಿ, ಪುಷ್ಪವೃಷ್ಟಿ ಗರೆದರು.
    ಸನ್ಮಾನ ಸ್ವೀಕರಿಸಿ ಪಿಎಸ್‌ಐ ಮಹಾದೇವ ಯಲಿಗಾರ ಮಾತನಾಡಿ, ಇಲ್ಲಿವರೆಗೂ ಕರೊನಾ ತಡೆಯವಲ್ಲಿ ಎಲ್ಲರೂ ಸಹಕಾರ ನೀಡಿದ್ದೀರಿ. ಇನ್ನು ಮುಂದೆಯೂ ಸಹ ಗುಂಪುಗುಂಪಾಗಿ ತಿರುಗಾಡಬಾರದು. ಟಂಟಂ, ಆಟೋಗಳ ಸಂಚಾರ ಇರುವುದಿಲ್ಲ. ಸ್ವಂತ ವಾಹನಗಳಲ್ಲಿ ಮಾಸ್ಕ್ ಧರಿಸಿ, ಒಬ್ಬೊಬ್ಬರೇ ತಿರುಗಾಡಬೇಕು. ರೈತರು ಯಾವುದೇ ಭಯವಿಲ್ಲದೇ ಕೃಷಿ ಷಟುವಟಿಕೆಗಳಲ್ಲಿ ತೊಡಗಬಹುದು ಎಂದರು.
    ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕೆಲಸಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಕರೊನಾ ವಾರಿಯರ್ಸ್‌ಗಳಾದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮಸ್ಥರು ಅಭಿನಂದಿಸಿದರು.
    ತಾಪಂ ಸದಸ್ಯ ಅಮಸಿದ್ಧ ಬಳಗಾನೂರ, ಗ್ರಾಪಂ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಹಣಮಂತ ಬಳಗಾನೂರ, ಪಪ್ಪು ತಾವಸ್ಕರ್, ಬಾಷಾಸಾಬ ಮಕಾನದಾರ್, ಶಿವಪ್ಪ ಇಚ್ಚೂರ, ಮಳೆಪ್ಪ ಬಡಿಗೇರ, ದತ್ತು ಕುಲಕರ್ಣಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts