More

    ವಿಮಾನ ಬಿದ್ದಾಗ ಛಿದ್ರಗೊಂಡ ಶರೀರವೊಂದು ನನ್ನ ಕಾರಿನ ಮೇಲೆಯೇ ಬಿತ್ತು: ಪ್ರತ್ಯಕ್ಷದರ್ಶಿಯ ವಿವರಣೆ

    ಕರಾಚಿ: ಪಾಕಿಸ್ತಾನ ಇಂಟರ್​ನ್ಯಾಷನಲ್ ಏರ್​ಲೈನ್ಸ್​ಗೆ ಸೇರಿದ ಪಿಕೆ8303 ವಿಮಾನ ನಿನ್ನೆ ವಸತಿ ಪ್ರದೇಶದಲ್ಲೇ ಪತನವಾಗಿದ್ದು, ಒಂದು ಮಟ್ಟಿನ ಪರಿಹಾರ ಕಾರ್ಯಗಳೆಲ್ಲ ಮುಗಿದು ಅವಶೇಷಗಳನ್ನು ಅಲ್ಲಿಂದ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಆ ದುರಂತ ಸಂಭವಿಸಿದ ಕ್ಷಣವನ್ನು ಸ್ಥಳೀಯರು ಈಗ ಮತ್ತೆ ಮೆಲುಕು ಹಾಕಲಾರಂಭಿಸಿದ್ದಾರೆ.

    ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

    ವಿಮಾನ ಇನ್ನೇನು ನಿಲ್ದಾಣದಲ್ಲಿ ಇಳಿಯುವುದಕ್ಕೆ ಸಿದ್ಧತೆಯಲ್ಲಿದ್ದಾಗ ಇಂಜಿನ್ ಕೈಕೊಟ್ಟು ಸೀದಾ ವಸತಿ ಪ್ರದೇಶದ ಮೇಲೆ ಬಿದ್ದು ಸ್ಫೋಟಗೊಂಡು ಅಲ್ಲಿ ಧೂಳು ಮತ್ತು ಕಪ್ಪು ಹೊಗೆ ದಟ್ಟವಾಗಿ ಆವರಿಸಿದ್ದ ವಿಡಿಯೋಗಳು ನಿನ್ನೆ ವ್ಯಾಪಕವಾಗಿ ಪ್ರಸಾರವಾಗಿದ್ದವು. ಇಂದು ಬೆಳಗ್ಗೆ ಮನೆಯೊಂದ ಮೇಲಿದ್ದ ಸಿಸಿಟಿವಿ ಸೆರೆಹಿಡಿದ ವಿಮಾನ ಪತನದ ಕ್ಷಣಗಳ ದೃಶ್ಯಾವಳಿ ವೈರಲ್ ಆಗಿತ್ತು.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

    ಈ ನಡುವೆ, ಘಟನಾ ಸ್ಥಳದಲ್ಲಿದ್ದ ಒಬ್ಬಬ್ಬರೂ ತಮಗಾದ ಅನುಭವವನ್ನು ಹೇಳಲಾರಂಭಿಸಿದ್ದಾರೆ. ರಾಜಾ ಅಂಜಾದ್​ ಎಂಬುವವರು ಘಟನಾ ಸ್ಥಳದ ಸಮೀಪವೇ ಕಾರು ನಿಲ್ಲಿಸಿದ್ದರು. ಅವರು ಹೇಳಿದ್ದಿಷ್ಟು – ವಿಮಾನ ಪತನವಾಗುತ್ತಿದ್ದಂತೆ ಅಲ್ಲಿ ಧೂಳು ಮತ್ತು ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು. ಅಲ್ಲದೆ ಅಗ್ನಿಯ ಕೆನ್ನಾಲಗೆ ಹೊರಗೆ ಚಾಚಿತ್ತು. ಅವುಗಳ ನಡುವೆಯೇ ಪುಡಿಯಾದ ವಿಮಾನ ಕಾಣುತ್ತಿತ್ತು. ವಿಮಾನದೊಳಗಿನಿಂದ ಛಿದ್ರಗೊಂಡ ಶರೀರಗಳು ಎತ್ತರಕ್ಕೆ ಚಿಮ್ಮಿ ಕೆಳಗೆ ಬೀಳುತ್ತಿದ್ದವು. ಒಂದು ಶರೀರ ನನ್ನ ಕಾರಿನ ಮೇಲೆಯೇ ಬಿತ್ತು. ಪತನಗೊಂಡ ವಿಮಾನದೊಳಗಿಂದ ಒಬ್ಬ ಹೊರಗೆ ಬರಲು ಪ್ರಯತ್ನಿಸುತ್ತಿದ್ದ. ಕೂಡಲೇ ನನ್ನ ಸುತ್ತ ಇದ್ದವರಿಗೆ ಕೂಗಿ ಹೇಳಿದೆ – ಒಬ್ಬನಿಗೆ ಜೀವ ಇದೆ, ಆತ ಹೊರಬರುತ್ತಿದ್ದಾನೆ ಎಂದು. ಆದರೆ, ಆತನ ಕಾಲು ಎಮರ್ಜೆನ್ಸಿ ಡೋರ್​ ನಡುವೆ ಸಿಲುಕಿಕೊಂಡಿತ್ತು. ನಾನೇ ಓಡಿ ಹೋದೆ, ಆತನನ್ನು ಹೊರಗೆಳೆದು ರಕ್ಷಿಸಲು ಪ್ರಯತ್ನಿಸಿದೆ, ಆಗಲಿಲ್ಲ. ಕೂಡಲೇ ತುರ್ತು ಸೇವೆಗೆ ಕರೆ ಮಾಡಿ ಹೇಳಿದೆ. ಅವರು ಬಂದು ಆತನನ್ನು ರಕ್ಷಿಸಿದರು. ವಿಮಾನ ದುರಂತದಲ್ಲಿ ಇಬ್ಬರು ಬದುಕಿ ಉಳಿದಿದ್ದರು ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

    ಈ ನಡುವೆ ಸ್ಥಳೀಯ ನಿವಾಸಿ ನಜೀಬ್ ಉರ್ ರೆಹಮಾನ್ ಹೇಳಿದ್ದು ಇಷ್ಟು- ಭೀಕರ ಸ್ಪೋಟದ ಸದ್ದು ಕೇಳಿತ್ತು. ಕೂಡಲೇ ಮನೆಯಿಂದ ಹೊರಗೋಡಿ ಬಂದೆ. ಸುತ್ತಲೂ ಹೊಗೆ ತುಂಬಿಕೊಂಡಿತ್ತು. ಅದರ ನಡುವೆ ಬೆಂಕಿಯ ಕೆನ್ನಾಲಗೆ ಹೊರ ಚಾಚಿತ್ತು. ಮನೆಯೊಂದರ ಛಾವಣಿಗೂ ಬೆಂಕಿ ಹತ್ತಿಕೊಂಡದ್ದನ್ನು ನೋಡಿದೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ:  ಪಾಕ್​ ವಿಮಾನ ಅಪಘಾತದಲ್ಲಿ ಬದುಕುಳಿದವನಿಗೆ ಇದೆ ಭಾರತದ ಕನೆಕ್ಷನ್​!

    ಅಗ್ನಿಶಾಮಕ ಸೇವೆಯ ಉದ್ಯೋಗಿ ಸರ್ಫರಾಜ್ ಅಹಮದ್ ಹೇಳುವ ಪ್ರಕಾರ, ವಿಮಾನದೊಳಗೆ ಇದ್ದವರಿಗೆ ದುರಂತದ ಸೂಚನೆ ಸಿಕ್ಕ ಕೂಡಲೇ ಅನೇಕರು ಸೀಟ್​ಬೆಲ್ಟ್​ ಮತ್ತು ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿದ್ದರು. ಕರೊನಾ ಲಾಕ್​ಡೌನ್ ನಂತರ ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನ ಸರ್ಕಾರ ದೇಶೀಯ ವಿಮಾನ ಸೇವೆ ಶುರುಮಾಡಿತ್ತು. ಈ ದುರಂತ ಸ್ಥಳದಲ್ಲಿ ನೋವಿನ ಕರಿಛಾಯೆ ಆವರಿಸಿಕೊಂಡಿದೆ. (ಏಜೆನ್ಸೀಸ್​)

    VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts