ನೇಪಾಳ ವಿಮಾನ ಪತನ: ಭಾರತೀಯ ಪ್ರಯಾಣಿಕನ ಫೇಸ್​ಬುಕ್​ ಲೈವ್​ನಲ್ಲಿ ಭಯಾನಕ ದೃಶ್ಯ ಸೆರೆ

blank

ಕಠ್ಮಂಡು: ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಯೇತಿ ಏರ್‌ಲೈನ್ಸ್ ಎಟಿಆರ್​-72 ವಿಮಾನ ರನ್​ವೇನಲ್ಲಿ ಪತನಗೊಂಡ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರು ಮೃತಪಟ್ಟಿದ್ದಾರೆ. ಐವರು ಭಾರತೀಯರು ಸೇರಿದಂತೆ 72 ಮಂದಿ ವಿಮಾನದಲ್ಲಿದ್ದರು. ಸದ್ಯ 68 ಜನರ ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಮಾನದಲ್ಲಿ 64 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳು ಇದ್ದರು. ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನವಾಗಿದೆ. ಸುಮಾರು 45 ಮಂದಿ ಮೃತಪಟ್ಟಿದ್ದಾರೆ ಎಂದು ಕೆಲ ಪ್ರಯಾಣಿಕರು ಹೇಳುತ್ತಿದ್ದಾರೆ. ಆದರೆ, ಇದು ಅಧಿಕೃತವಾಗಿದೆ. ಈವರೆಗೆ 32 ಮಂದಿ ಮೃತಪಟ್ಟಿರುವುದು ದೃಢವಾಗಿದೆ.

ಕಠ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ಲೈನ್ಸ್ ಎಟಿಆರ್​-72 ವಿಮಾನವು ಭಾನುವಾರ (ಜ.15) ಬೆಳಗ್ಗೆ 10.30ಕ್ಕೆ ಟೇಕಾಪ್​ ಆಗಿತ್ತು. 68 ಪ್ರಯಾಣಿಕರು ಸೇರಿ ನಾಲ್ವರು ಸಿಬ್ಬಂದಿ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ಲ್ಯಾಂಡಿಗ್​ ಆಗಬೇಕು ಅನ್ನುವಷ್ಟರಲ್ಲಿ ಪೋಖರಾ ವಿಮಾನ ನಿಲ್ದಾಣದ ರನ್​ ವೇ ಸಮೀಪ ಸೇತಿ ನದಿ ತೀರದಲ್ಲಿ ಪತನಗೊಂಡು ನೆಲಕ್ಕೆ ಅಪ್ಪಳಿಸಿದೆ. ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಈ ಘಟನೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಪಘಾತದಲ್ಲಿ ಮೃತಪಟ್ಟ ಭಾರತೀಯ ಪ್ರಯಾಣಿಕರೊಬ್ಬರು ಮಾಡಿರುವ ಫೇಸ್​ಬುಕ್​ ಲೈವ್​ ವಿಡಿಯೋ ವಿಮಾನ ಪತನದ ಭೀಕರತೆಯನ್ನು ತೆರೆದಿಟ್ಟಿದೆ. ಹಾರಾಟ ನಡೆಸುತ್ತಿದ್ದ ವಿಮಾನ ಅಲುಗಾಡುತ್ತಾ ಕಳಗೆ ಬಿದ್ದು ಪತನಗೊಂಡ ಬೆನ್ನಲ್ಲೇ ಬೆಂಕಿ ಹೊತ್ತಿ ಉರಿಯುವ ಭಯಾನಕ ದೃಶ್ಯ ವಿಡಿಯೋದಲ್ಲಿದೆ. ಅಲ್ಲದೆ, ಪ್ರಯಾಣಿಕರು ಅಳುತ್ತಿರುವ ಶಬ್ಧವನ್ನು ಸಹ ಕೇಳಬಹುದು.

ಪತನದಲ್ಲಿ ಉತ್ತರ ಪ್ರದೇಶ ಮೂಲದ ಐವರು ಭಾರತೀಯರು ಅಸುನೀಗಿದ್ದಾರೆ. ಅವರಲ್ಲಿ ಸೋನು ಜೈಸ್ವಾಲ್​ ಕೂಡ ಒಬ್ಬರು. ಪ್ರಯಾಣದ ವೇಳೆ ಜೈಸ್ವಾಲ್​ ಫೇಸ್​ಬುಕ್​ ಲೈವ್​ ಮಾಡುತ್ತಿದ್ದರು. ಆದಾಗ್ಯೂ, ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ವಿಡಿಯೋದಲ್ಲಿ ವಿಮಾನದೊಳಗಿನ ಪ್ರಯಾಣಿಕರನ್ನು ಮತ್ತು ಕೆಳಗಿನ ನಗರವನ್ನು ತೋರಿಸುತ್ತದೆ. ಕಿಟಕಿ ಪಕ್ಕದ ಸೀಟಿನಿಂದ ಸೆರೆಹಿಡಿಯಲಾಗಿದೆ. ವಿಮಾನವು ಇದ್ದಕ್ಕಿದ್ದಂತೆ ಓರೆಯಾಗುತ್ತಿರುವುದನ್ನು ಮತ್ತು ಕೆಳಗೆ ಬಿದ್ದು ಬೆಂಕಿಯನ್ನು ಹೊತ್ತಿಕೊಂಡ ದೃಶ್ಯವಿದೆ.

ವಿಮಾನ ಪತನವಾದ ದಿನ ಬಿಡುಗಡೆಯಾದ ವಿಡಿಯೋವೊಂದರಲ್ಲಿ ಹಾರಾಟದ ನಡುವೆ ನಿಯಂತ್ರಣ ಕಳೆದುಕೊಂಡ ವಿಮಾನ ಅಲುಗಾಡುತ್ತಾ ಒಂದೇ ಕಡೆ ವಾಲಿಕೊಂಡು ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯವಿತ್ತು. (ಏಜೆನ್ಸೀಸ್​)

ನೇಪಾಳದಲ್ಲಿ ವಿಮಾನ ಪತನ: 68ಕ್ಕೇರಿದ ಸಾವಿನ ಸಂಖ್ಯೆ, ಐವರು ಭಾರತೀಯರೂ ಸಾವು?

ಧರಣಿಯಲ್ಲಿ ಕುಕ್ಕುಟ ಕಾಳಗ; ಹುಂಜದ ಜೊತೆ ನಾಯಕ ಮನೋಜ್ ಫೋಟೋಶೂಟ್

ಮೀನು ಮರಿ ಉತ್ಪಾದಿಸಿ, ಲಕ್ಷ ಲಕ್ಷ ಸಂಪಾದಿಸಿ!

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…