More

    ತೀವ್ರ ಹಸಿವಿನಿಂದ ಒಂದನ್ನೊಂದು ತಿಂದು ಬದುಕುತ್ತಿವೆ ಶ್ವಾನಗಳು: ಮೂಕ ಪ್ರಾಣಿಗಳ ನೋವು ಕೇಳುವರಿಲ್ಲ!

    ಪೋರ್ಟ್​ ಲೂಯೀಸ್​: ಹಸಿವು ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ದೂರದ ಸ್ವರ್ಗ ದ್ವೀಪ ಮಾರಿಷಸ್​ನಲ್ಲಿ ನಡೆದಿರುವ ಆತಂಕಕಾರಿ ಘಟನೆ ಉದಾಹರಣೆಯಾಗಿದೆ. ತೀವ್ರ ಹಸಿವಿನಿಂದಾಗಿ ನಾಯಿಗಳು ಪರಸ್ಪರ ತಿಂದು ಬದುಕುತ್ತಿರುವ ದೃಶ್ಯ ಮನಕಲಕುವಂತಿದೆ.

    ಮಾರಿಷಸ್​ ದೇಶದ ವ್ಯಕ್ತಿಯೊಬ್ಬ 2020ರ ಡಿಸೆಂಬರ್​ನಲ್ಲಿ ನಾಪತ್ತೆಯಾದ ತನ್ನ ನಾಯಿಯನ್ನು ಹುಡುಕುತ್ತಾ ಸರ್ಕಾರಿ ಸ್ವಾಮ್ಯದ ಕೇಂದ್ರವೊಂದಕ್ಕೆ ತೆರಳುತ್ತಾನೆ. ಈ ವೇಳೆ ಶ್ವಾನ ಕೇಂದ್ರದಲ್ಲಿನ ಅಮಾನವೀಯ ಪರಿಸ್ಥಿತಿಯನ್ನು ಕಂಡು ಬೆಚ್ಚಿಬೀಳುತ್ತಾನೆ. ತೀವ್ರ ಹಸಿವಿನಿಂದ ಬಳಲುತ್ತಿದ್ದ ನಾಯಿಗಳು ಬದುಕಲು ಇತರೆ ಸತ್ತ ಮತ್ತು ಸಾಯುವ ಹಂತದಲ್ಲಿದ್ದ ನಾಯಿಗಳನ್ನು ತಿನ್ನುವುದು ಮತ್ತು ಅವುಗಳ ರಕ್ತವನ್ನು ಸುತ್ತುವರಿದು ಹೀರುತ್ತಿರುವ ದೃಶ್ಯ ಎಂಥವರ ಎದೆಯನ್ನು ನಡುಗಿಸುವಂತಿದೆ.

    ಇದನ್ನೂ ಓದಿರಿ: ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ- ಆರು ಮಂದಿ ಸ್ಥಳದಲ್ಲೇ ಸಾವು

    ಈ ಬಗ್ಗೆ ಮಾತನಾಡಿರುವ ಹೇಸರೇಳಲು ಇಚ್ಛಿಸಿದ ವ್ಯಕ್ತಿ, ಸುಮಾರು 30 ರಿಂದ 40 ಶ್ವಾನಗಳನ್ನು ಕೂಡಿಟ್ಟಿದ್ದ ಪಂಜರನ್ನು ನೋಡಿದೆ. ಅದರಲ್ಲಿ ಕೆಲವೊಂದಿಷ್ಟು ಶ್ವಾನಗಳಿಗೆ ಕೊರಳ ಪಟ್ಟಿಯನ್ನು ಹಾಕಲಾಗಿತ್ತು. ರಕ್ತ ಮಿಶ್ರಿತ ಏಪ್ರನ್ ಧರಿಸಿದ ಮಹಿಳಾ ಸಿಬ್ಬಂದಿಯೊಬ್ಬಳು ಅಲ್ಲಿಯೇ ಇದ್ದಳು. ಶ್ವಾನ ಕೇಂದ್ರಕ್ಕೆ ತೆರಳುವ ಮುನ್ನ ನನ್ನ ಮೊಬೈಲ್​ ಫೋನ್​ ಅನ್ನು ಕಾರಿನಲ್ಲಿ ಇಡುವಂತೆ ಒತ್ತಾಯ ಮಾಡಿದರು ಎಂದು ತಿಳಿಸಿದ್ದಾರೆ.

    ಶ್ವಾನ ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂದು ಮಾರಿಷಿಯನ್ನರು ತಿಳಿದಿದ್ದರೆ, ಒಂದು ವೇಳೆ ಚಿತ್ರೀಕರಿಸಲು ನನಗೆ ಅವಕಾಶ ನೀಡಿದ್ದರೆ, ಮಾರಿಷಿಯನ್ನರು ಖಂಡಿತ ಪ್ರತಿಭಟನೆ ಮಾಡುತ್ತಿದ್ದರು ಎಂದು ವ್ಯಕ್ತಿ ಹೇಳಿದ್ದಾರೆ.

    ಹ್ಯೂಮನ್ ಸೊಸೈಟಿ ಆಫ್​ ಇಂಟರ್ನ್ಯಾಷನಲ್ ಪ್ರಾಣಿ ದಯಾ ಸಂಘ (ಎಚ್​ಎಸ್​ಐ) ಕಳೆದ ಡಿಸೆಂಬರ್​ನಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ್ದ ವಿಡಿಯೋದಲ್ಲಿ ಶ್ವಾನ ಕೇಂದ್ರದ ಭಯಾನಕ ದೃಶ್ಯ ಹೊರಜಗತ್ತಿಗೆ ತಿಳಿದಿತ್ತು. ಸತ್ತ ನಾಯಿಯೊಂದು ಅಸ್ಥಿಪಂಜರದ ರೀತಿ ಬಿದ್ದಿರುವುದು ಮತ್ತು ಜೀವಂತವಾಗಿರುವ ಮತ್ತೊಂದು ನಾಯಿಯ ಮೇಲೆ ದಾಳಿ ಮಾಡಿರುವುದು ವಿಡಿಯೋದಲ್ಲಿ ಗೋಚರವಾಗಿತ್ತು. ಅಲ್ಲದೆ, ಶ್ವಾನಗಳು ನೋವಿನಿಂದ ಕೂಗಾಡುವುದು ಹಾಗೂ ಕಣ್ಣಂಚಲ್ಲಿ ನೀರು ಸುರಿಯುತ್ತಿರುವ ದೃಶ್ಯವಿತ್ತು. ಒಟ್ಟು 20 ಸೆಕೆಂಡ್​ ವಿಡಿಯೋದಲ್ಲಿ ಪ್ರಾಣಿ ದೌರ್ಜನ್ಯದ ಸಂಪೂರ್ಣವೇ ಚಿತ್ರವಿತ್ತು ಮತ್ತು ಅನೇಕ ವರ್ಷಗಳಿಂದ ಪ್ರಾಣಿಗಳ ಮೇಲಿನ ಹಿಂಸೆ ನಡೆಯುತ್ತಿದೆ ಎಂಬುದನ್ನು ಸಾರುವಂತಿತ್ತು.

    ಇದನ್ನೂ ಓದಿರಿ: ದೈಹಿಕ ಸಂಭೋಗ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ: ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವಿದು!

    ಅನೇಕ ಶ್ವಾನಗಳನ್ನು ಒಂದೇ ಪಂಜರದಲ್ಲಿ ತುಂಬಿಡಲಾಗಿದೆ. ಅಲ್ಲಿಯೇ ಕೆಲ ಶ್ವಾನಗಳು ಸತ್ತು ಬಿದ್ದಿದ್ದು, ಸುತ್ತಲೂ ರಕ್ತದ ಕಲೆಗಳೇ ಕಾಣುವಂತಿದೆ. ಸಾವಿರಾರು ಶ್ವಾನಗಳು ಮಾರಿಷಸ್​ ಬೀದಿಗಳಲ್ಲಿ ಮತ್ತು ಸಮುದ್ರ ತೀರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತಿವರ್ಷ ಅವುಗಳನ್ನು ಹಿಡಿದು ಮಾರಿಷಸ್ ಸೊಸೈಟಿ ಫಾರ್ ಅನಿಮಲ್ ವೆಲ್ಫೇರ್ (ಎಂಎಸ್​ಎಡಬ್ಲ್ಯು) ಕೇಂದ್ರದಲ್ಲಿ ಇಡಲಾಗುತ್ತದೆ. ಶ್ವಾನಗಳನ್ನು ಮರಳಿ ಪಡೆಯಲು ಯಾರು ಬರದಿದ್ದಾಗ ಅವುಗಳನ್ನು ಕೊಂದು ಹಾಕಲಾಗುತ್ತದೆ. ಈ ಬಗ್ಗೆ ಮಾರಿಷಸ್​ ಪ್ರಾಣಿ ಪ್ರಿಯರ ಆಕ್ಷೇಪವಿದೆ. (ಏಜೆನ್ಸೀಸ್​)

    ಗೋಹತ್ಯೆ ನಿಷೇಧ ಪಾಸ್; ಗದ್ದಲದ ನಡುವೆಯೇ ಪರಿಷತ್​ನಲ್ಲಿ ವಿಧೇಯಕ ಅಂಗೀಕಾರ

    ಆಸ್ಪತ್ರೆ ಬೆಡ್​ ಮೇಲೆಯೇ ವಧುವಿಗೆ ತಾಳಿ ಕಟ್ಟಿದ ವರ: ಕಾರಣ ಕೇಳಿದ್ರೆ ನಿಜಕ್ಕೂ ಹುಬ್ಬೇರಿಸ್ತೀರಾ!

    ಎಲ್​ಪಿಜಿ ಸಬ್ಸಿಡಿಗೆ ಶೀಘ್ರ ಬ್ರೇಕ್?; ಹೊರೆ ಇಳಿಕೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts