More

    ಉತ್ತಮ ಆಹಾರದಿಂದ ಒಳ್ಳೆಯ ಮನಸ್ಸು ಸಿದ್ಧಿ

    ವಿಜಯವಾಣಿ ಸುದ್ದಿಜಾಲ ಮಂಗಳೂರು

    ಉತ್ತಮ ಆಹಾರ ಸೇವನೆಯಿಂದ ಒಳ್ಳೆಯ ಮನಸ್ಸು ಸಿದ್ದಿಸುತ್ತದೆ, ಒಳ್ಳೆಯ ಮನಸ್ಸಿನಿಂದ ಉತ್ತಮ ಸಮಾಜಮುಖಿ ಕಾರ್ಯಕ್ರಮ ನೆರವೇರುತ್ತದೆ, ಅದಕ್ಕೆ ಸಾಕ್ಷಿ ಶ್ರೀ ಕ್ಷೇತ್ರ ಹೊರನಾಡು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನ ಹಳ್ಳಿ ಹೇಳಿದರು.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ದ.ಕ ಜಿಲ್ಲೆ ಮತ್ತು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಭಕ್ತವೃಂದ ಸಹಯೋಗದಲ್ಲಿ ಮಂಗಳೂರಿನ ನಂತೂರಿನ ಶ್ರೀ ಭಾರತಿ ಕಾಲೇಜಿನಲ್ಲಿ ಶಂಕರ ಶ್ರೀ ಸಭಾಭವನದಲ್ಲಿ ನಡೆದ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಏ.22ರಿಂದ 28ರ ವರೆಗೆ ನಡೆಯಲಿರುವ ಕುಂಭಾಭಿಷೇಕದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಸೇವಿಸುವ ಅನ್ನದಲ್ಲೂ ದೇವರನ್ನು ಕಂಡಂತಹ ಸಮಾಜ ಹಿಂದೂ ಸಮಾಜ. ಅದಕ್ಕಾಗಿಯೇ ಅನ್ನ ನೀಡುವ ತಾಯಿಯನ್ನು ಅನ್ನಪೂರ್ಣೇಶ್ವರಿಯನ್ನಾಗಿ ಕಂಡಂತಹ ದೊಡ್ಡ ವಿಶಾಲ ದೃಷ್ಟಿ ಹಿಂದುಗಳದ್ದು. ಅದಕ್ಕಾಗಿ ತಿನ್ನುವ ಒಂದು ಅನ್ನದ ಅಗುಳನ್ನು ವ್ಯರ್ಥ ಮಾಡಬಾರದು. ದೇಶದ ಜನತೆಯ ಸುಬೀಕ್ಷೆಗಾಗಿ ಶ್ರೀಕ್ಷೇತ್ರದಲ್ಲಿ ಕುಂಭಾಭಿಷೇಕ ನಡೆಯಲಿದ್ದು, ಎಲ್ಲರೂ ಕೈಜೋಡಿಸಬೇಕು ಎಂದರು.

    ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಶಿ ಮಾತನಾಡಿ, ನಾಡಿನ ಬೇರೆ ಯಾವ ಭಾಗದಲ್ಲೂ ದೇವರಿಗೆ ಕೇವಲ ಅಕ್ಕಿಯನ್ನು ನೈವೇದ್ಯವನ್ನಾಗಿ ಸಮರ್ಪಿಸುವ ಸಂಪ್ರದಾಯವಿಲ್ಲ, ಆದರೆ ಶ್ರೀ ಕ್ಷೇತ್ರದಲ್ಲಿ ರೀ ಅನ್ನಪೂರ್ಣೇಶ್ವರಿಗೆ ಅಕ್ಕಿಯನ್ನು ಸಮರ್ಪಿಸಿ ತದನಂತರ ಅದೇ ಅಕ್ಕಿಯನ್ನು ಅನ್ನ ಬೇಯಿಸಿ ಅದನ್ನು ಭಕ್ತ ಜನರಿಗೆ ಹಂಚಲಾಗುತ್ತದೆ, ಇದುವೇ ಶ್ರೀದೇವಿಗೆ ವಿಶೇಷ ನೈವೇದ್ಯ ಸಮರ್ಪಣೆ. ಇಂದು ತಾಯಿಯೇ ಭಕ್ತರ ಬಳಿ ಬಂದು ತನ್ನ ಸನ್ನಿಧಾನಕ್ಕೆ ಬಂದು ಕೃತಕೃತ್ಯರನ್ನಾಗಿಸಿ ಕೊಳ್ಳುವ ವಿಶೇಷ ಆಹ್ವಾನ ನೀಡಿದ್ದಾಳೆ ಎಂದರು.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಹೇಶ ಕಜೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕದ ಸಂಚಾಲಕ ಸುಬ್ರಹ್ಮಣ್ಯ, ಕುಡುಪು ಕೃಷ್ಣರಾಜ ತಂತ್ರಿ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ನಗರದ ಸಂಘ ಚಾಲಕ ಸುನಿಲ್ ಆಚಾರ್, ಸುಧಾಕರ್ ರಾವ್ ಪೇಜಾವರ್, ಗೃಹ ರಕ್ಷಕ ದಳದ ಮುಖ್ಯಸ್ಥ ಡಾಕ್ಟರ್ ಮುರಳಿ ಮೋಹನ್ ಚೂಂತಾರ್ ಸೇರಿದಂತೆ ಹಲವರು ಇದ್ದರು.
    ಶಶಿಪ್ರಭಾ ಪ್ರಾರ್ಥಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಸಂಚಾಲಕಿ ಚೇತನ ದತ್ತಾತ್ರೇಯ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts