More

    ಶ್ರೀರಾಮ ಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬವಾಗಲಿ ಎಂದ ಕಾಂಗ್ರೆಸ್ !

    ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆಗೆ ಸಿದ್ಧತೆ ನಡೆಯುತ್ತಿದ್ದು, ಮುನ್ನಾದಿನ ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿ ಶ್ರೀರಾಮ ಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬವಾಗಲಿ ಎಂದು ಹಾರೈಸಿದೆ.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ವಕ್ತಾರ ರಣದೀಪ್ ಸುರ್ಜೇವಾಲ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಯನ್ನು ಓದಿ ಹೇಳಿದ್ರು. ಹೇಳಿಕೆಯ ಸಾರ ಹೀಗಿದೆ- ರಾಮ ಎಲ್ಲರೊಂದಿಗೂ ಇದ್ದಾನೆ. ಆತನಿಗೆ ದೀನಬಂಧು ಎಂಬ ಹೆಸರಿದ್ದು, ಅದು ಸರಳತೆ, ಧೈರ್ಯ, ತ್ಯಾಗ, ಬದ್ಧತೆಯ ಸಂಕೇತವಾಗಿದೆ. ಭಾರತೀಯ ಉಪಖಂಡದ ಸಂಸ್ಕೃತಿಯೊಳಗೆ ರಾಮಾಯಣ, ರಾಮ, ಸೀತೆ ಎಲ್ಲರೂ ಹಾಸುಹೊಕ್ಕಂತೆ ಇದ್ದಾರೆ. ರಾಮಾಯಣದ ಕಥೆ ನಮ್ಮ ಸಂಸ್ಕೃತಿಯನ್ನು ಬೆಳಗುತ್ತಿದ್ದು, ಧಾರ್ಮಿಕ ಆಚರಣೆಗಳಿಗೂ ಕನ್ನಡಿಯಂತಿದೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ

    ಪ್ರಿಯಾಂಕಾ ಅವರು ತಮ್ಮ ಹೇಳಿಕೆಯಲ್ಲಿ ಖ್ಯಾತ ಕವಿಗಳಾದ ಮೈಥಿಲಿ ಶರಣ್ ಗುಪ್ತಾ, ಮಹಾಪ್ರಾಣ್ ನಿರಾಲಾ ಮುಂತಾದವರನ್ನು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)

    ರಾಮಲಲ್ಲಾಗೆ ಸಜ್ಜಾಗಿವೆ ವಿಶೇಷ ಉಡುಪುಗಳು; ಚಿನ್ನದ ದಾರದಲ್ಲಿ ಒಂಬತ್ತು ರತ್ನ ಪೋಣಿಸಿದ ಮಖ್ಮಲ್ ವಸ್ತ್ರ, ಹಸಿರು- ಕಿತ್ತಳೆ ಬಣ್ಣದ ಬಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts