More

    ಭಾರತೀಯರ ಹೃದಯದಲ್ಲಿ ಪುರುಷೋತ್ತಮ

    ಕುಕನೂರು: ಕೋಟಿ ಭಾರತೀಯರ ಹೃದಯಾಳದಿಂದ ಶ್ರೀರಾಮ ಮಂದಿರ ಮೂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.
    ಪಟ್ಟಣದ ಜೋಡು ಮಾರುತೇಶ್ವರ ದೇವಸ್ಥಾನ ಹಾಗೂ ಮಹಾಮಾಯಾ ದೇವಸ್ಥಾನದವರೆಗೆ ಪಾದಯಾತ್ರೆಯಲ್ಲಿ ಸೋಮವಾರ ಮಾತನಾಡಿದರು.

    ಕರಸೇವಕರ, ಹಿರಿಯರ ಭವ್ಯ ಕನಸು ನನಸಾಗಿದೆ. ಹೋರಾಟದ ಹಾದಿ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಹಿಂದೆ ರಾಮಾಯಣದಲ್ಲಿ ಶ್ರೀರಾಮಚಂದಿರ ವನವಾಸಕ್ಕೆ ತೆರಳಿ ಕಷ್ಟಗಳನ್ನು ಅನುಭವಿಸಿದ. ರಾಮನು ತಂದೆಯ ಮಾತಿನಂತೆ ಕಾಡಿಗೆ ತೆರಳಿದ್ದನು. ಮರಳಿ ಅಯೋಧ್ಯೆಗೆ ಬಂದ ಸಂದರ್ಭದಲ್ಲಿ ಪ್ರಜೆಗಳ ನೀಡಿದ ಪ್ರೀತಿ ಅಪಾರ. ರಾಮನನ್ನು ಕಂಡು ಪ್ರಜೆಗಳು ಹರ್ಷವಾಗಿದ್ದರು. ಅಂದಿನ ಹರ್ಷೋದ್ಘಾರ ಮತ್ತೆ ಮರುಕಳಿಸಿದೆ. ಮಂದಿರಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗಿರುವುದು ಭಾರತೀಯರಲ್ಲಿ ಹರ್ಷವನ್ನು ಇಮ್ಮಡಿಗೊಳಿಸಿದೆ ಎಂದರು.

    ಮೂರ್ತಿ ಪ್ರತಿಷ್ಠಾಪನೆ ಭಾರತೀಯರಲ್ಲಿ ಹರ್ಷ

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡಿರುವುದು ಹೆಮ್ಮೆಯ ಸಂಗತಿ. ಇದೊಂದು ಭಾರತದ ಅಭೂತಪೂರ್ವ ಸಮಯ ಸಹ ಹೌದು. ಭಾರತೀಯರ ನೂರಾರು ವರ್ಷಗಳ ಹೋರಾಟದ ಫಲ ಸಿಕ್ಕಿದೆ. ಶ್ರೀರಾಮ ಮಂದಿರ ಇಡೀ ವಿಶ್ವಕ್ಕೆ ಭವ್ಯ ಮಂದಿರ ಆಗಲಿದೆ. ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

    ಇದನ್ನೂ ಓದಿ: ಅಮಿತಾಭ್, ಚಿರಂಜೀವಿ… ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದ್ರು..?

    ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಮಾತನಾಡಿ, ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೂರಾರು ವರ್ಷಗಳಿಂದ ಸಾವಿರಾರು ಜನರು ಹೋರಾಟ ಮಾಡಿದ್ದಾರೆ. ಹೋರಾಟದ ಫಲದಿಂದ ಮಂದಿರ ನಿರ್ಮಾಣವಾಗಿದೆ. ಭಾರತೀಯರ ಅಭಿಲಾಷೆ ಈಡೇರಿದೆ ಎಂದರು.
    ಪಟ್ಟಣದ ಬಜಾರ್ ಮಾರುತಿ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಭಾವಚಿತ್ರಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು ಪುಷ್ಪ ನಮನ ಸಲ್ಲಿಸಿದರು.
    ಪ್ರಮುಖರಾದ ಶಿವಕುಮಾರ ನಾಗಲಾಪೂರಮಠ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಶಂಭು ಜೋಳದ, ಪ್ರಕಾಶ ಬೋರಣ್ಣನವರ್, ವೀರೇಶ ಸಬರದ, ಶಿವರಾಜಗೌಡ ಯಲ್ಲಪ್ಪಗೌಡರ, ಮಾರುತಿ ಗಾವರಾಳ, ಕರಬಸಯ್ಯ ಬಿನ್ನಾಳ, ರಾಜು ದ್ಯಾಂಪೂರು, ಮಹಾಂತೇಶ ಹೂಗಾರ, ಬಸವರಾಜ ಹಾಳಕೇರಿ, ರವಿ ಜಕ್ಕಾ, ಮಂಜುನಾಥ ಮಾಲಗಿತ್ತಿ, ಬಸವರಾಜ ಉಮಚಗಿ, ಮಂಜುನಾಥ, ಶಶಿ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts