More

    ಬೇನಾಮಿಗಳ ಹೆಸರಿನಲ್ಲಿ ಪಿಟಿಪಿ ಆಸ್ತಿ ಸಂಪಾದನೆ

    ಹೂವಿನಹಡಗಲಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಬೆನಾಮಿಗಳ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿ ಕ್ಷೇತ್ರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಆರೋಪಿಸಿದರು.

    ಪಟ್ಟಣದ ಮಹತ್ಮಾಗಾಂಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟಿನ ಕಾಯಕ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, 1999ರಲ್ಲಿ ಕೇವಲ ಒಂದು ಜನತಾ ಮನೆ, 7 ಎಕ್ಕರೆ ಜಮೀನು, 4 ಜನ ಸಹೋದರರ ಹೆಸರಿನಲ್ಲಿತ್ತು. ಪ್ರಸ್ತುತ ಅವರ ಆಸ್ತಿ ಪ್ರಮಾಣ ಎಷ್ಟಿದೆ ಎಂದರೆ, ಬೆಂಗಳೂರು, ದಾವಣಗೆರೆ, ಹರಪನಹಳ್ಳಿ, ಲಕ್ಷ್ಮೀಪುರತಾಂಡಾ, ಹೂವಿನಹಡಗಲಿ, ಮುಂಡರಗಿ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ 22 ಜನ ಬೆನಾಮಿಗಳ ಹೆಸರಿನ ಮೇಲೆ ಆಸ್ತಿ ಮಾಡಿದ್ದಾರೆ. ಇವರ ಅನೈತಿಕ ಸಂಬಂಧದ ಕುರಿತು ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದ ಅಧಿಕಾರಿಗೆ ಶಾಸಕ ಏನು ಮಾಡಿದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಶಾಸಕರ ವಿರುದ್ಧ ಕ್ಷೇತ್ರದಲ್ಲಿ ಪಕ್ಷದಿಂದ ಟಿಕೆಟ್ ಕೇಳುವ ಗಂಡು ಯಾರೂ ಇಲ್ಲ ಎಂದಿದ್ದರು. ಇಂದು 7 ಜನ ಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್ ಕೇಳಿದ್ದಾರೆ.

    ಶಾಸಕ ಪ್ರಸ್ತುತ 6ನೇ ಬಾರಿ ಚುನಾವಣೆಗೆ ಸ್ಫರ್ಧಿಸಲು ಮುಂದಾಗಿದ್ದಾರೆ ಆದರೆ, ಪಕ್ಷ ಹೊಸಬರಿಗೆ ಅವಕಾಶ ಕಲ್ಪಿಸಲಿ. ಕ್ಷೇತ್ರದಲ್ಲಿ ಹಿಂದುಳಿದ ಜನಾಂಗದ ವ್ಯಕ್ತಿಗೆ ಅವಕಾಶಗಳು ಲಭಿಸಲಿ. ಕ್ಷೇತ್ರದ ಜನತೆ ಮತ್ತೊಮ್ಮೆ ಪರವೇಶ್ವರನಾಯ್ಕರನ್ನು ಗೆಲ್ಲಿಸಿದರೆ ಕ್ಷೇತ್ರವನ್ನು ಸಂಪೂರ್ಣ ಕೊಳ್ಳೆ ಹೊಡೆಯುತ್ತಾರೆ. ಅವರು ತನ್ನ ಬೆಂಬಲಿಗರಾದ ಐಗೋಳ್ ಚಿದಾನಂದ, ಚಂದ್ರಾನಾಯ್ಕ, ಆನಂದನಾಯ್ಕ, ಕುಮಾರನಾಯ್ಕ, ಮೊಳಕಾಲ್ಮೂರಿನ ಗುತ್ತಿಗೆದಾರ ಹೀಗೆ ಅನೇಕರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಆಸ್ತಿ ಮಾಡಿಸಿಕೊಂಡವರು ಎಂದಿಗೂ ಶಾಸಕರಿಗೆ ಮರಳಿಸಬೇಡಿ ಎಂದು ಕಿವಿ ಮಾತು ಹೇಳಿದರು.

    ಅನೈತಿಕ ಸಂಬಂಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶಾಸಕರು ಬಳ್ಳಾರಿ ಬೆಳಗಲ್ ರಸ್ತೆಗೆ ಯಾಕೆ ಪದೆ ಪದೆ ತೆರಳುತ್ತಾರೆ ಎಂದು ಮರು ಪ್ರಶ್ನಿಸಿದರು. ರಾಜ್ಯದಲ್ಲಿ ಯಾರ‌್ಯಾರೋ ಮನೆಗಳ ಮೇಲೆ ಲೋಕಾಯುಕ್ತ, ಎಸಿಬಿ ದಾಳಿಗಳಾಗುತ್ತಿವೆ. ಯಾಕೆ ಶಾಸಕ ಪಿ.ಟಿ.ಪಿ. ಮನೆ ಮೇಲೆ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮಹತ್ಮಾಗಾಂಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೃಷ್ಣಾನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts