More

    ಮುಂಗಡ ಕಾಯ್ದಿರಿಸುತ್ತಿರುವ ಜನ

    ಹೂವಿನಹಡಗಲಿ: ಈ ಭಾರಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದ್ದು, ವಿನಾಯಕ ಮೂರ್ತಿಗಳನ್ನು ಜನ ಮುಂದಡವಾಗಿ ಕಾಯ್ದಿರಿಸುತ್ತಿದ್ದಾರೆ.

    ಪಟ್ಟಣಕ್ಕೆ ಹೊಳಲು ಸೇರಿ ವಿವಿಧ ಗ್ರಾಮಗಳಿಂದ ಬರುತ್ತಿರುವ ಜನರು, ಈಗಿನಿಂದಲೇ ತಯಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ. 1ರಿಂದ 5 ಅಡಿ ಎತ್ತರದವರೆಗೂ ಇರುವ ನಾನಾ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಈಗಾಗಲೇ ಬಂದಿವೆ. ರಾಮ ಮಂದಿರದ ಮುಂದೆ ನಿಂತ ರಾಮನ ರೂಪದ ಗಣೇಶ ವಿಗ್ರಹ, ದತ್ತಾತ್ರೇಯ ರೂಪದ ಗಣೇಶನ ವಿಗ್ರಹಗ, ತಾವರೆ ಹೂವಿನಲ್ಲಿ ಅರಳಿದ ವಿಗ್ರಹ ಆಕರ್ಷಿಸುತ್ತಿವೆ. ಆದಾಗ್ಯೂ ಮಣ್ಣಿನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ನೂರಾರು ಜನ ಮುಂಗಡ ಕಾಯ್ದಿರಿಸಲು ಮುಂದಾಗಿದ್ದಾರೆ.

    ಕಲಾವಿದ ಸುರೇಶ ಬಡಿಗೇರ ಇವರು ಮಣ್ಣಿನಿಂದ ತಯಾರಿಸಿದ ವಿಗ್ರಹಗಳಿಗೆ ಭಾರಿ ಬೇಡಿಕೆ ಇದೆ. ರಾಣೇಬೆನ್ನೂರು, ಹಾವೇರಿ, ಗದಗ, ಡಾವಣಗೇರಿ, ಹರಪನಹಳ್ಳಿ, ಶಿರಹಟ್ಟಿ ಮೊದಲಾದ ಕಡೆಗಳಿಗೂ ಲಗ್ಗೆ ಇಟ್ಟಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts