More

    144 ದೇಶಗಳಲ್ಲಿ ಲಂಬಾಣಿಗರು ವಾಸ

    ಹೂವಿನಹಡಗಲಿ: ಲಂಬಾಣಿಗರು ಸಾಂಸ್ಕೃತಿಕ ಆಚರಣೆ, ಉಡುಗೆ, ತೊಡುಗೆ, ಭಾಷೆ, ಜೀವನಕ್ರಮಗಳಿಂದ ಶ್ರೀಮಂತರಾಗಿದ್ದಾರೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಡಾ.ಎಲ್. ಪಿ.ಕಠಾರಿ ನಾಯ್ಕ ಅಭಿಪ್ರಾಯಪಟ್ಟರು.

    ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಜಾರ ಸಮುದಾಯದವರು ಕರ್ನಾಟಕ ರಾಜ್ಯವಲ್ಲದೆ ದೇಶದ ಇತರ ಭಾಗಗಳಲ್ಲೂ ವಾಸವಾಗಿದ್ದಾರೆ. ಪ್ರಪಂಚದ 144 ದೇಶಗಳಲ್ಲಿ ಈ ಜನಾಂಗದವರಿದ್ದಾರೆ. ಎಲ್ಲರೂ ಆಡುವ ಭಾಷೆ ಒಂದೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯದಂತೆ ಸಮಾಜದವರಿಗೆ ಶಿಕ್ಷಣ, ಉದ್ಯೋಗ ಸೇರಿ ಇತರ ಕ್ಷೇತ್ರಗಳಲ್ಲಿ ಸಮನಾದ ಸ್ಥಾನಮಾನ ದೊರಕುತ್ತಿದೆೆ ಎಂದರು.

    ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಜಿ. ಬಸವರಾಜ, ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್, ಕಸಾಪ ಮಾಜಿ ಅಧ್ಯಕ್ಷರಾದ ಎಚ್.ಜಿ.ಪಾಟೀಲ್, ಕೌಸಲ್ಯಾಬಾಯಿ, ಇಟ್ಟಿಗಿ ಘಟಕದ ಸಂಘಟನಾ ಕಾರ್ಯ ದರ್ಶಿ ಎಂ. ನಿಂಗರಾಜ್, ಶಿಕ್ಷಕ ಯುವರಾಜಗೌಡ, ಸಿಬ್ಬಂದಿ ವಿ.ಭೀಮಾ ನಾಯ್ಕ, ಎಸ್.ತೋಫಿಕ್, ಬಸವರಾಜ ರೊಟ್ಟಿ ಇತರರಿದ್ದರು.

    ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಮಾಜಿ ತಾಲೂಕು ಅಧ್ಯಕ್ಷೆ ಕೌಸಲ್ಯಾಬಾಯಿ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್, ಪ್ರಾಚಾರ್ಯ ಜಿ.ಬಸವರಾಜ, ಎಂ.ನಿಂಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts