More

    VIDEO | ಸೀರೆಯಲ್ಲಿ ರಿಂಗ ರಿಂಗ, ಸೂಪರ್ರೋ ರಂಗ..! ಸಾರಿಫ್ಲೋನಿಂದ ಟ್ವಿಟರ್​ಗೆ ಬಂದ ಎಶ್ನಾ ಕುಟ್ಟಿ..

    ಬೆಂಗಳೂರು: ಮಲಯಾಳಂ ಚಿತ್ರನಟಿ ಪ್ರಿಯಾ ಪ್ರಕಾಶ್ ವಾರಿಯರ್​ ಒಂದೇ ಒಂದು ವಾರೆನೋಟದಿಂದ ರಾತೋರಾತ್ರಿ ಯುವಪೀಳಿಗೆಯ ಕ್ರಷ್​ ಎನಿಸಿಕೊಂಡಿದ್ದರು. ಈಗ ಎಶ್ನಾ ಕುಟ್ಟಿ ಎಂಬ ಯುವತಿ ಸೀರೆಯಲ್ಲೇ ರಿಂಗ ರಿಂಗ ಎಂದು ಸೂಪರ್ರೋ ರಂಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಸಾರಿಫ್ಲೋ.

    ಹೂಪ್​ ಡ್ಯಾನ್ಸರ್​ ಆಗಿರುವ ಎಶ್ನಾ ಕುಟ್ಟಿ ಸೀರೆ ಉಟ್ಟು, ಶೂ ಧರಿಸಿ, ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ತುಣುಕೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ #sareeflow ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಹಂಚಿಕೊಂಡಿದ್ದರು. ಸೀರೆ ಉಟ್ಟುಕೊಂಡೂ ಅಸಾಮಾನ್ಯ ಎನಿಸಿದ್ದನ್ನು ಮಾಡಬಹುದು ಎಂದು ಸಾರುವ ಉದ್ದೇಶ ಅವರದ್ದಾಗಿದ್ದು, ಏಕೆ ಆ ಹ್ಯಾಷ್​ಟ್ಯಾಗ್ ಬಳಸಿದ್ದು ಎನ್ನುವುದನ್ನೂ ಅಲ್ಲಿ ಹೇಳಿಕೊಂಡಿದ್ದಾರೆ.

    ಹೀಗೆ ಅವರು ಪೋಸ್ಟ್​ ಮಾಡಿದ್ದ 24 ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಮಾತ್ರವಲ್ಲ, ಅದೇ ಹ್ಯಾಷ್​ಟ್ಯಾಗ್​ ಜತೆ ಟ್ವಿಟರ್​ನಲ್ಲೂ ಶೇರ್​ ಆಗಿ ವೈರಲ್​ ಆಗಿದೆ. ಎಷ್ಟರಮಟ್ಟಿಗೆ ಎಂದರೆ ನಿನ್ನೆಯವರೆಗೂ ಟ್ಟಿಟರ್​ನಲ್ಲಿರದ ಎಶ್ನಾ, ಶುಕ್ರವಾರ ಟ್ಟಿಟರ್​ನಲ್ಲೂ ಖಾತೆ ತೆರೆಯುವಂತೆ ಮಾಡಿದೆ.

    ಸೀರೆಯಲ್ಲಿ ರಿಂಗ ರಿಂಗ, ಸೂಪರ್ರೋ ರಂಗ..! ಸಾರಿಫ್ಲೋನಿಂದ ಟ್ವಿಟರ್​ಗೆ ಬಂದ ಎಶ್ನಾ ಕುಟ್ಟಿ..

    ಮಲಯಾಳಂ ಚಿತ್ರನಟಿ ಪ್ರಿಯಾ ಪ್ರಕಾಶ್ ವಾರಿಯರ್​ ಒಂದೇ ಒಂದು ವಾರೆನೋಟದಿಂದ ರಾತೋರಾತ್ರಿ ಯುವಪೀಳಿಗೆಯ ಕ್ರಷ್​ ಎನಿಸಿಕೊಂಡಿದ್ದರು. ಈಗ ಎಶ್ನಾ ಕುಟ್ಟಿ ಎಂಬ ಯುವತಿ ಸೀರೆಯಲ್ಲೇ ರಿಂಗ ರಿಂಗ ಎಂದು ಸೂಪರ್ರೋ ರಂಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಸಾರಿಫ್ಲೋ.#sareeflow #EshnaKutty #Hoop

    Posted by Vijayavani on Friday, September 25, 2020

    ಅದಾಗಲೇ ಹರಿದಾಡುತ್ತಿರುವ ತನ್ನ ಡಾನ್ಸ್​ ವಿಡಿಯೋ ಪೋಸ್ಟ್​ ಒಂದನ್ನು ರಿಟ್ವೀಟ್​ ಮಾಡಿಕೊಂಡಿರುವ ಎಶ್ನಾ, “ನಾನು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದ ಪೋಸ್ಟ್ ಇಲ್ಲಿಗೂ ಬಂದು ಇಷ್ಟೊಂದು ಹರಿದಾಡುತ್ತೆ ಎಂದುಕೊಂಡಿರಲಿಲ್ಲ. ನಾನು ಟ್ವಿಟರ್ ಅಕೌಂಟ್​ ಕೂಡ ತೆರೆಯುತ್ತೇನೆ ಅಂತಂದುಕೊಂಡಿರಲಿಲ್ಲ..” ಎಂದು ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts