More

    ಮರ್ಯಾದಾ ಹತ್ಯೆಗೀಡಾಗಿ ಸತ್ತವಳು ಪತಿ,ಮಗುವಿನೊಂದಿಗೆ ಪ್ರತ್ಯಕ್ಷ: ಜೈಲಿನಲ್ಲಿದ್ದಾರೆ ಅಪ್ಪ,ಅಣ್ಣಂದಿರು!

    ಅಮ್ರೋಹಾ : ತಮ್ಮ ಇಚ್ಛೆಗೆ ವಿರುದ್ಧವಾಗಿ ನೆರೆಮನೆಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಂದೆ ಹಾಗೂ ಇಬ್ಬರು ಸೋದರರು ಮರ್ಯಾದಾಗೇಡು ಹತ್ಯೆ ಮಾಡಿದ ಆರೋಪದಡಿ ಬಂಧಿಯಾಗಿದ್ದಾರೆ. ಆದರೆ ಸತ್ತಿದ್ದಾಳೆ ಎಂದು ಭಾವಿಸಲಾದ ಮಹಿಳೆ ಮದುವೆಯಾಗಿ ಗಂಡ ಹಾಗೂ ಮಗುವಿನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾಳೆ. ಒಂದೇ ವಾರದಲ್ಲಿ, ಉತ್ತರ ಪ್ರದೇಶ ಪೊಲೀಸರು ಮಾಡದ ಅಪರಾಧಕ್ಕಾಗಿ ವ್ಯಕ್ತಿಗಳನ್ನು ಬಂಧಿಸಿದ ಎರಡನೇ ಪ್ರಕರಣ ಇದಾಗಿದೆ.

    ಇದನ್ನೂ ಓದಿ:  ಸತ್ತಿದ್ದಾಳೆ ಎಂದುಕೊಂಡಾಕೆ ಬದುಕಿದ್ದಳು; ಮಾಡದ ಹತ್ಯೆಗಾಗಿ 8 ತಿಂಗಳಿಂದ ಜೈಲಿನಲ್ಲಿದ್ದಾರೆ ಮೂವರು 

    ತಂದೆ ಮತ್ತು ಇಬ್ಬರು ಸಹೋದರರು ಆಕೆಯನ್ನು ಕೊಲೆ ಮಾಡಿದ್ದಕ್ಕಾಗಿ ಬಂಧಿತರಾಗಿದ್ದಾರೆ, ಆದರೆ ಮಹಿಳೆ ಅಮ್ರೋಹಾದಲ್ಲಿ ಜೀವಂತವಾಗಿರುವುದು ಪತ್ತೆಯಾಗಿದೆ. ಆಕೆಯನ್ನು “ಮರ್ಯಾದಾಗೇಡು ಹತ್ಯೆ” ಮಾಡಲಾಗಿದೆ ಮತ್ತು ಆಕೆಯ ಶವವನ್ನು ಗಂಗಾ ನದಿಯಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಹೇಳಿದ್ದರು.
    ಅಮ್ರೋಹಾ ಜಿಲ್ಲೆಯ ಆದಂಪೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಈ ಹೊಸ ಪ್ರಕರಣ ನಡೆದಿದೆ. ಫೆಬ್ರವರಿ 2019ರಲ್ಲಿ ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಕುಟುಂಬವು ಮೊದಲು ಆ ಹಳ್ಳಿಯಲ್ಲಿ ವಾಸಿಸುವ ವ್ಯಕ್ತಿಯು ಆಕೆಯ ಅಪಹರಣದಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಿದ್ದರು . ಆದರೆ ನಂತರ, ತನಿಖೆ ನಡೆಸುತ್ತಿದ್ದ ಸ್ಥಳೀಯ ಪೊಲೀಸರು ಆಕೆಯ ತಂದೆ, ಸಹೋದರ ಮತ್ತು ಸೋದರಸಂಬಂಧಿ ಆಕೆಯನ್ನು ಕೊಂದು ಶವವನ್ನು ಗಂಗಾ ನದಿಯಲ್ಲಿ ಎಸೆದಿದ್ದಾರೆ ಎಂದು ಹೇಳಿದ್ದರು.

    ಇದನ್ನೂ ಓದಿ: ನಿಯಂತ್ರಣ ತಪ್ಪಿ 20 ಅಡಿ ಕೆಳಕ್ಕೆ ಬಿದ್ದ ಕಾರು- ಮುಂದೆ ಆಗಿದ್ದೆಲ್ಲಾ ಪವಾಡವೇ!

    ಬಾಲಕಿ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನೆರೆಮನೆಯವನೊಂದಿಗೆ ಸಂಬಂಧ ಹೊಂದಿದ್ದಳು. 10 ತಿಂಗಳ ತನಿಖೆಯ ನಂತರ, ಆದಂಪುರ ಪೊಲೀಸ್ ಠಾಣಾಧಿಕಾರಿ ಈ ಮೂವರನ್ನು ಬಂಧಿಸಿ ಈ ಮೂವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು. ಮೂವರನ್ನು ಜೈಲಿಗೆ ಕಳುಹಿಸಿದ ಬೆನ್ನಲ್ಲೇ ಪೊಲೀಸರು ಅವರ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
    ಆದರೆ ಎರಡು ದಿನಗಳ ಹಿಂದೆ ಅದೇ ಗ್ರಾಮದಲ್ಲಿ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದಳು. ಗ್ರಾಮಸ್ಥರು ಮಾಹಿತಿ ನೀಡಿದಾಗ ಆಕೆ ತನ್ನ ಪತಿಯೊಂದಿಗೆ ಉಳಿದುಕೊಂಡಿದ್ದ ಮನೆಗೆ ಪೊಲೀಸರು ತೆರಳಿ ವಿಚಾರಣೆ ನಡೆಸಿದರು. ಫೆಬ್ರವರಿ ತಿಂಗಳಲ್ಲಿ ಆಕೆ ಅವನೊಂದಿಗೆ ಓಡಿಹೋಗಿದ್ದಳು. ಆಗ ಅವಳು ಅಪ್ರಾಪ್ತಳಾಗಿದ್ದಳು ಮತ್ತು ಗರ್ಭಿಣಿಯಾದಳು, ಅದಕ್ಕಾಗಿಯೇ ಅವಳು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಇಬ್ಬರೂ ಮದುವೆಯಾದರು ಮತ್ತು ಈಗ ಅವರಿಗೆ ಒಂದು ಮಗು ಕೂಡ ಇದೆ. ಪತಿ, ಪತ್ನಿ ಹಾಗೂ ಮಗುವಿನೊಂದಿಗೆ ಸಂತೋಷದಿಂದ ಜೀವನ ನಡೆಸುತ್ತಿದ್ದಾಳೆ.

    ಇದನ್ನೂ ಓದಿ: ಕೇರಳ ಸರ್ಕಾರವನ್ನೇ ಅಲ್ಲಾಡಿಸುತ್ತಿರೋ ಸ್ಮಗ್ಲಿಂಗ್ ರಾಣಿಗೆ ಸಿಗದ ಜಾಮೀನು

    ಆರಂಭದಲ್ಲಿ, ದಂಪತಿ ದೆಹಲಿಯಲ್ಲಿಯೇ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಆ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು. ಆಗಿನ ಆದಂಪುರ ಪೊಲೀಸ್ ಠಾಣೆಯ ಅಧಿಕಾರಿಯಾಗಿದ್ದ ಅಶೋಕ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ಅಮ್ರೋಹಾ ಎಸ್‌ಪಿ ವಿಪಿನ್ ತಾಡಾ ತಿಳಿಸಿದ್ದಾರೆ. ತಂಡದ ಇತರ ಸದಸ್ಯರ ಪಾತ್ರವನ್ನು ಸಹ ಪರಿಶೀಲಿಸಲಾಗುತ್ತಿದೆ. ಇನ್ಸ್‌ಪೆಕ್ಟರ್ ಅಶೋಕ್ ಶರ್ಮಾ ನೇತೃತ್ವದ ಅಂದಿನ ತಂಡವು ಮಹಿಳೆಯ ತಂದೆ ಮತ್ತು ಸಹೋದರರನ್ನು ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತ್ತು ಎಂದು ಶಂಕಿಸಲಾಗಿದೆ.
    ಶರ್ಮಾ ಅವರನ್ನು ಈಗ ನ್ಯಾಯಾಲಯ ಭದ್ರತಾ ಘಟಕಕ್ಕೆ ನಿಯೋಜಿಸಲಾಗಿದ್ದು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. 

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕರೊನಾ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts