More

    ಹೊನ್ನಾಳಿ, ನ್ಯಾಮತಿ ತಾಲೂಕಲ್ಲಿ ನಿಲ್ಲದ ವರುಣ

    ಹೊನ್ನಾಳಿ: ತಾಲೂಕಿನಾದ್ಯಂತ ಮಳೆ ಬುಧವಾರವೂ ಮುಂದುವರಿಯಿತು. ಹೊನ್ನಾಳಿ, ಕುಂದೂರು, ಸಾಸ್ವೆಹಳ್ಳಿ, ಬೆಳಗುತ್ತಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಎಡೆಬಿಡದೆ ಮಳೆ ಸುರಿಯಿತು.

    ಹಿರೇಗೋಣಿಗೆರೆ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದೆ. ಹೊನ್ನಾಳಿ ನಗರ, ಸುಂಕದಕಟ್ಟೆ ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

    ತಾಲೂಕಿನಾದ್ಯಂತ ಶೇ. 90ರಷ್ಟು ಬಿತ್ತನೆಯಾಗಿತ್ತು. ಆದರೆ, ಸತತವಾಗಿ ಮಳೆಯಾಗಿದ್ದರಿಂದ ಬೆಳೆಗಳಿಗೆ ಶೀತ ಆಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ತುಂಬುವ ಹಂತದಲ್ಲಿ ಕೆರೆ ಕಟ್ಟೆಗಳು

    ನ್ಯಾಮತಿ ತಾಲೂಕಿನಾದ್ಯಂತ ಮಳೆ ಸುರಿಯುತ್ತಲೇ ಇದ್ದು, ಕೆರೆಕಟ್ಟೆಗಳು ತುಂಬುವ ಹಂತ ತಲುಪಿವೆ. ಬಸವನಹಳ್ಳಿ ಗ್ರಾಮದ ಕಲ್ಲಪ್ಪ ಎಂಬುವವರ ಮನೆಯ ಗೋಡೆ ಭಾಗಶಃ ಹಾನಿಯಾಗಿದೆ.

    ಮಳೆ ವಿವರ

    ಮಳೆ ಮಾಪನ ಕೇಂದ್ರಗಳಾದ ಸವಳಂಗ 23.3 ಮಿ.ಮೀ, ಬೆಳಗುತ್ತಿ 21.0 ಮಿ.ಮೀ, ಗೋವಿನಕೋವಿ 16.2 ಮಿ.ಮೀ ಮಳೆಯಾಗಿರುವುದಾಗಿ ದಾಖಲಾಗಿದೆ. ಹೊನ್ನಾಳಿ 7.4 ಮಿ.ಮೀ., ಹರಳಹಳ್ಳಿ 17.2 ಮಿ.ಮೀ., ಕುಂದೂರು 8.4 ಮಿ.ಮೀ ಮಳೆಯಾಗಿದೆ. ನದಿ ನೀರಿನ ಮಟ್ಟ 9.600 ಮೀಟರ್‌ನಷ್ಟಿದೆ.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts