More

    ಹೊನ್ನಾಳಿಯಲ್ಲಿ ಅಣಬೆ ಪ್ರಿಯರಿಗೆ ಹಬ್ಬ

    ಶ್ರೀನಿವಾಸ್ ಟಿ.ಹೊನ್ನಾಳಿ
    ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿದ ಮಳೆರಾಯ ಸದ್ಯ ವಿರಾಮ ನೀಡಿದ್ದು, ಅಣಬೆ ಪ್ರಿಯರಿಗೆ ಸುಗ್ಗಿ ಕಾಲ ಬಂದಂತಾಗಿದೆ. ಹೊಲ, ಗದ್ದೆ, ಅರಣ್ಯದಲ್ಲಿ ಬೆಳೆದ ಅಣಬೆ ತರಲು ರೈತರು ಬೆಳಗ್ಗೆಯೇ ಅತ್ತ ಮುಖ ಮಾಡುತ್ತಿದ್ದಾರೆ.

    ಮಳೆಗಾಲದ ಅತಿಥಿ ಎಂದು ಕರೆಯುವ ಅಣಬೆಗೆ ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 300 ರಿಂದ 400 ಇದೆ. ನೈಸರ್ಗಿಕವಾಗಿ ಬೆಳೆಯುವ ಅಣಬೆಗೆ ಬೇಡಿಕೆ ಹೆಚ್ಚಿದ್ದು, ದರ ಹೆಚ್ಚಾದರೂ ಸರಿ ಖರೀದಿ ಮಾಡುತ್ತಿದ್ದಾರೆ. ಇದನ್ನೇ ಉಪ ಕಸುಬಾಗಿಸಿಕೊಂಡಿರುವ ಕೆಲ ರೈತರು ಬೆಳಗಿನ ಜಾವವೇ ಎದ್ದು ಹೊಲ, ಗದ್ದೆ ಹಾಗೂ ಕಾಡಂಚಿನ ಪ್ರದೇಶಗಳಿಗೆ ಹೋಗಿ ಹುಲುಸಾಗಿ ಬೆಳೆದಿರುವ ಅಣಬೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ.

    ಪೌಷ್ಟಿಕ ಹಾಗೂ ರುಚಿಕರ ಎನ್ನುವ ಕಾರಣಕ್ಕೆ ಪಟ್ಟಣ ಹಾಗೂ ಹಳ್ಳಿಗರು ಮೊದಲೇ ರೈತರಿಗೆ ಆರ್ಡರ್ ನೀಡಿ ತರಿಸಿಕೊಳ್ಳುತ್ತಿದ್ದಾರೆ. ಮಾಂಸಾಹಾರಿಗಳು ಖರೀದಿ ಮಾಡುವುದು ಹೆಚ್ಚು. ಅಣಬೆಯನ್ನು ಸಾಕಷ್ಟು ಬಾರಿ ತೊಳೆದು ಮಸಾಲೆ ಹಾಕಿ ಸಾಂಬಾರ್ ಸೇರಿ ವಿವಿಧ ಬಗ್ಗೆ ಅಡುಗೆ ಸಿದ್ಧಪಡಿಸಲಾಗುತ್ತದೆ.

    ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಎಂದಿಗಿಂತ ಈ ಬಾರಿ ಹೆಚ್ಚು ಅಣಬೆ ಸಿಗುತ್ತಿದೆ ಎನ್ನುತ್ತಾರೆ ರೈತರು.

    ಮೊಗ್ಗಿನ ಅಣಬೆಗೆ ಹೆಚ್ಚು ಬೇಡಿಕೆ: ದೊಡ್ಡ ಅಣಬೆಗಿಂತ ಮೊಗ್ಗಿನ ಅಣಬೆಗೆ ಹೆಚ್ಚು ಬೇಡಿಕೆ ಇದೆ. ಮಾರುಕಟ್ಟೆಗೆ ತಂದು ಅರ್ಧ ಗಂಟೆಯಲ್ಲೇ ಖಾಲಿಯಾಗುತ್ತಿದೆ. ಅಪರೂಪಕ್ಕೆ ಸಿಗುವ ಕಾರಣಕ್ಕೆ ಪ್ರತಿ ಗ್ರಾಹಕರು 2 ರಿಂದ 3 ಕೆಜಿಯಷ್ಟು ಖರೀದಿಸುತ್ತಿದ್ದಾರೆ. ತಾಲೂಕಿನ ಮಾಸಡಿ, ತರಗನಹಳ್ಳಿ, ಅರಕೆರೆ, ನರಸಗೊಂಡನಹಳ್ಳಿ, ಘಂಟ್ಯಾಪುರ ಸೇರಿ ವಿವಿಧ ಹಳ್ಳಿಗಳಲ್ಲಿ ಹೆಚ್ಚು ಸಿಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts