More

    ಕುಸ್ತಿಗೆ ಶಕ್ತಿ ಜತೆ ಯುಕ್ತಿಯೂ ಅವಶ್ಯ

    ಹೊನ್ನಾಳಿ: ಕುಸ್ತಿ ಕೇವಲ ಒಂದು ಕ್ರೀಡೆಯಲ್ಲ, ಅದು ಜಾನಪದ ಕಲಾ ಪ್ರಕಾರ ಕೂಡ ಆಗಿದೆ ಎಂದು ಮಾಜಿ ಪೈಲ್ವಾನ್ ಎಚ್.ಬಿ. ಗಿಡ್ಡಪ್ಪ ಹೇಳಿದರು.

    ಶ್ರೀ ಬೀರಲಿಂಗೇಶ್ವರ ಕಾರ್ತಿಕೋತ್ಸವ ದೇವರ ಗುಗ್ಗಳದ ಹಿನ್ನೆಲೆಯಲ್ಲಿ ಪಟ್ಟಣದ ಕುರಿ ಸಂತೆ ಮೈದಾನದಲ್ಲಿ ಮೂರು ದಿನ ಆಯೋಜಿಸಿರುವ ಬಯಲು ಖಾಟಾ ಜಂಗೀ ಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ, ಮಾತನಾಡಿದರು.

    ಕುಸ್ತಿ ಕ್ರೀಡೆಯಲ್ಲಿ ಶಕ್ತಿಯೊಂದಿಗೆ ಯುಕ್ತಿಯೂ ಅವಶ್ಯಕ. ಇದು ಇದ್ದರೆ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು.

    ನಿವೃತ್ತ ದೈಹಿಕ ವಿಷಯ ಶಿಕ್ಷಣಾಧಿಕಾರಿ ಗಾಳಿ ರವಿ ಮಾತನಾಡಿ, ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಒಂದೆರಡು ಗರಡಿ ಮನೆಗಳು ಇರುತ್ತಿದ್ದವು. ಯುವಕರು ನಿತ್ಯವೂ ತಾಲೀಮು ನಡೆಸುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಬದುಕಿನ ಪ್ರತೀಕವಾದ ಕುಸ್ತಿ ಮಾಯವಾಗುತ್ತಿರುವುದು ತುಂಬ ಬೇಸರದ ಸಂಗತಿ ಎಂದು ವಿಷಾದಿಸಿದರು.

    ಪುರಸಭೆ ಮಾಜಿ ಸದಸ್ಯ ಎಚ್.ಬಿ. ಅಣ್ಣಪ್ಪ, ಎನ್.ಕೆ. ಆಂಜನೇಯ, ಮುಖಂಡರಾದ ಸಣ್ಣಕ್ಕಿ ಬಸವನಗೌಡ, ಎಚ್.ಡಿ. ವಿಜೇಂದ್ರಪ್ಪ, ಪರಸಣ್ಣಾರ ನರಸಿಂಹಪ್ಪ, ಗೌಡ್ರ ನರಸಪ್ಪ, ಗಾಳಿ ರವಿ, ಮಾದಪ್ಪ, ದೇವರ ಗಣಮಕ್ಕಳಾದ ಪ್ರಭು, ಅಣ್ಣಪ್ಪ ಇತರರಿದ್ದರು.

    ಮಾಜಿ ಪೈಲ್ವಾನರು ಕುಸ್ತಿ ಪಂದ್ಯಾವಳಿಯ ನಿರ್ಣಾಯಕರಾಗಿ ಸೇವೆ ಸಲ್ಲಿಸಿದರು. ಬೆಳಗಾವಿ, ಧಾರವಾಡ, ಅಥಣಿ, ದಾವಣಗೆರೆ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ ಮತ್ತಿತರ ಕಡೆಗಳಿಂದ ಪೈಲ್ವಾನರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts