More

    ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸುವೆ

    ಚನ್ನಮ್ಮ ಕಿತ್ತೂರು: ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉನ್ನತ ಸ್ಥಾನ ನೀಡುತ್ತಿದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

    ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬಿಜೆಪಿ ನನಗೆ ರೈತ ಮೋರ್ಚಾ ಅಧ್ಯಕ್ಷ ಸ್ಥಾನ ನೀಡಿರುವುದು ಸಂತಸದ ವಿಚಾರ. ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಅವರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

    ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿ-ಧಾರವಾಡ ಮಧ್ಯೆ ನೂತನ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆಂದೇ 988 ಕೋಟಿ ರೂ. ಅನುದಾನ ಮಂಜೂರಾಗಿದೆ. ಕರೊನಾ ಹಾವಳಿಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಹೊಲಗಳನ್ನು ರೈಲು ಮಾರ್ಗ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳುವ ಕಾರ್ಯ ಆರಂಭಗೊಳ್ಳಬೇಕಿದೆ. ಕಿತ್ತೂರಿನ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಬಿಡಿಭಾಗ ನಿರ್ಮಾಣ ತಯಾರಿಕಾ ಘಟಕ ಸ್ಥಾಪಿಸುವ ಯೋಜನೆ ಮಂಜೂರಾಗುವ ಹಂತದಲ್ಲಿದೆ. ಶೀಘ್ರ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.

    ಶಾಸಕ ಮಹಾಂತೇಶ ದೊಡಗೌಡರ ಈರಣ್ಣ ಕಡಾಡಿ, ಸಚಿವ ಸುರೇಶ ಅಂಗಡಿ ಅವರನ್ನು ಸನ್ಮಾನಿಸಿದರು. ಕಿತ್ತೂರು ಪ್ರಾಧಿಕಾರದ ಸದಸ್ಯ ಚಿನ್ನಪ್ಪ ಮುತ್ನಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ ದೇಶಪಾಂಡೆ, ನಿಜಲಿಂಗಯ್ಯ ಹಿರೇಮಠ, ಸಿ.ಎಸ್.ಮೋಕಾಸಿ, ಬಸವರಾಜ ಕೊಳದೂರ, ಬಸನಗೌಡ ಸಿದ್ರಾಮನಿ, ನ್ಯಾಯವಾದಿ ವಿಶ್ವನಾಥ ಬಿಕ್ಕಣ್ಣವರ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೇಗಡ್ಡಿ ಉಪಸ್ಥಿತರಿದ್ದರು.

    ಎಂ.ಕೆ.ಹುಬ್ಬಳ್ಳಿ ವರದಿ: ಸಮೀಪದ ದಾಸ್ತಿಕೊಪ್ಪ ಗ್ರಾಮದ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಮಹಾಂತೇಶ ದೊಡ ಗೌಡರ ಭೇಟಿ ನೀಡಿದರು. ಬಿಜೆಪಿ ಮುಖಂಡ ಬಸನಗೌಡ ಸಿದ್ರಾಮನಿ ಹಾಗೂ ಅಭಿಮಾನಿ ಬಳಗದಿಂದ ಗಣ್ಯರನ್ನು ಸತ್ಕರಿಸಲಾಯಿತು. ಉಮೇಶ ಶಿದ್ರಾಮನಿ, ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳಾಗಡ್ಡಿ, ಶ್ರೀಕರ ಕುಲಕರ್ಣಿ, ಬಿ.ಕೆ.ಪಾಟೀಲ, ರುದ್ರಗೌಡ ಹುಚಗೌಡ್ರ, ಗಂಗಪ್ಪ ಕೊತ್ತಲಮನಿ, ಸಿದ್ರಾಮ ಸಿದ್ರಾಮನಿ, ಶಿವಲಿಂಗ ಸಿದ್ರಾಮನಿ, ದಾದಾಸಾಬ ಸನದಿ, ಅಶೋಕ ಹುಚ್ಚಗೌಡ್ರ, ಶ್ರೀಶೈಲ ರಾವಳ, ಶಿವಲಿಂಗಯ್ಯ ಪೂಜೇರ, ಡಾ.ವೀರಣ್ಣ ಕೌಜಲಗಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts