More

    ರಾಮಲಲ್ಲಾ ದರ್ಶನಕ್ಕೆ ಹೋಟೆಲ್ ಬುಕ್ ಮಾಡುವ ಅಗತ್ಯವಿಲ್ಲ, ಈ ವಿಶೇಷ ವ್ಯವಸ್ಥೆ ಲಭ್ಯ!

    ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಗಾಗಿ ಧಾರ್ಮಿಕ ವಿಧಿಗಳು ಆರಂಭಗೊಂಡಿವೆ. ಜನವರಿ 22 ರಂದು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುವುದು. ಇಂದು ಗುರುವಾರ ದೇವಾಲಯದೊಳಗೆ ವಿಗ್ರಹ ಪ್ರವೇಶವಾಗಿದೆ. ಇನ್ನು ನೀವು ದೇವಾಲಯಕ್ಕೆ ಭೇಟಿ ನೀಡಲು ಬರುತ್ತಿದ್ದರೆ, ನಿಮಗಾಗಿ ಒಂದು ಆಸಕ್ತಿದಾಯಕ ಸುದ್ದಿ ಇದೆ. ಅದೇನಪ್ಪಾ ಅಂದ್ರೆ, ನೀವು ಅಯೋಧ್ಯೆಯ ಜನರ ಮನೆಗೆ ಹೋಗಿ ಉಳಿಯಬಹುದು. ಅಂದರೆ ಈಗ ಅಯೋಧ್ಯೆಯ ಜನರು ನಿಮಗೆ ಅವರ ಮನೆಯಲ್ಲಿ ಕೆಲವು ದಿನಗಳವರೆಗೆ ಇರಲು ಸ್ಥಳವನ್ನು ನೀಡುತ್ತಾರೆ.

    ಕೈಗೆಟಕುವ ದರದಲ್ಲಿ ಕೊಠಡಿಗಳನ್ನು ಒದಗಿಸುವ ಓಯೋ ಕಂಪನಿಯು ಇದೀಗ ಅಯೋಧ್ಯೆ ನಿವಾಸಿಗಳ ಮನೆಗಳಲ್ಲಿ 65 ‘ಹೋಮ್ ಸ್ಟೇ’ಗಳನ್ನು ಒದಗಿಸಿದೆ ಎನ್ನಲಾಗಿದೆ. ಯಾತ್ರಾರ್ಥಿಗಳಿಗಾಗಿ 51 ಓಯೋ ಹೋಮ್‌ಗಳು ಮತ್ತು 14 ಹೋಟೆಲ್‌ಗಳನ್ನು ತೆರೆಯಲಾಗಿದೆ. ಜನವರಿ 22 ರಂದು ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಯಾತ್ರಾರ್ಥಿಗಳು ಸೇರುವುದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇಂತಹ ಕ್ರಮ ಕೈಗೊಂಡಿದೆ.

    ಅಯೋಧ್ಯೆ ನಿವಾಸಿಗಳ ಮನೆಗಳಲ್ಲಿ ಓಯೋ ಕೊಠಡಿಗಳಂತಹ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಕಂಪನಿಯು ಹೋಟೆಲ್‌ಗಳು ಮತ್ತು ಮನೆಗಳಲ್ಲಿ ಓಯೋ ಅನ್ನು ನಡೆಸಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಪಾಲುದಾರಿಕೆ ಹೊಂದಿದೆ.

    ಓಯೋನ ವಿಶೇಷ ನಿರ್ದೇಶಕಿ ದೀಪಾ ಮಲಿಕ್ ಮಾತನಾಡಿ, ಅಯೋಧ್ಯೆಗೆ ಆಗಮಿಸುವ ಅಂಗವಿಕಲ ಭಕ್ತರ ಅನುಕೂಲಕ್ಕಾಗಿ ಕಂಪನಿಯು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಓಯೋ ಅವರಿಗಾಗಿ ರ‍್ಯಾಂಪ್ ಸೌಲಭ್ಯದೊಂದಿಗೆ 15 ಹೋಂ ಸ್ಟೇಗಳನ್ನು ತೆರೆದಿದೆ. ಹೋಟೆಲ್ ಅಥವಾ ಮನೆಯಲ್ಲಿ ಒಂದು ರಾತ್ರಿ ತಂಗಲು 1000 ರೂಪಾಯಿಗಳನ್ನು ಪಾವತಿಸಲು ನಿಗದಿಪಡಿಸಲಾಗಿದೆ. 

    ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನಾಂಕ ಗೊತ್ತಿತ್ತೇ?

    ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ; ಹನುಮ, ಗಣೇಶ ಸೇರಿದಂತೆ ದೇವರ ಅನೇಕ ಚಿತ್ರಗಳಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts