More

    ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸಿದರೆ ಈ ಸಮಸ್ಯೆಗೂ ಸಿಗಲಿದೆ ಪರಿಹಾರ

    ಬೆಂಗಳೂರು: ಪ್ರತಿ ನಿತ್ಯ ಹಲ್ಲುಜ್ಜುವಾಗ ಚೆನ್ನಾಗಿ ಬಾಯಿ ಮುಕ್ಕಳಿಸುತ್ತೇವೆ. ಕೆಲವರು ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಮುಕ್ಕಳಿಸುತ್ತಾರೆ. ಇನ್ನು ಕೆಲವರು ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುತ್ತಾರೆ. ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಬಾಯಿಯಲ್ಲಿ ವಾಸಿಸುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಮೂಲಕ ಕಲ್ಮಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಪ್ಲೇಕ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಸಡಿಲವಾದ ಹಲ್ಲು ಸರಿಪಡಿಸಲು ಸಹಾಯ ಮಾಡುತ್ತದೆ ಎಂಬ ವಿಚಾರ ಗೊತ್ತೇ, ಹೌದು, Loose Teeth ಸಮಸ್ಯೆಗೂ ಕೊಬ್ಬರಿ ಎಣ್ಣೆ ಬಳಸಿ ಬಾಯಿ ಮುಕ್ಕಳಿಸಿ ಎನ್ನುತ್ತಾರೆ ತಜ್ಱರು.

    ಯಾವ ಎಣ್ಣೆ ಸೂಕ್ತ?
    *1 ಚಮಚ ವರ್ಜಿನ್ ತೆಂಗಿನ ಎಣ್ಣೆ, ಎಳ್ಳು ಅಥವಾ ಆಲಿವ್ ಎಣ್ಣೆ
    ಬಳಸುವುದು ಹೇಗೆ?
    * ಬೆಳಗ್ಗೆ ಹಲ್ಲುಜ್ಜುವ ಮೊದಲು 15-20 ನಿಮಿಷಗಳ ಕಾಲ ಬಾಯಿಯಲ್ಲಿ ಎಣ್ಣೆ ಹಾಕಿ ಮುಕ್ಕಳಿಸಿ.
    * ಆ ನಂತರ ಎಣ್ಣೆ ಉಗಿದು, ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆಯಿರಿ.
    *ಎಂದಿನಂತೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ.

    ಎಷ್ಟು ಬಾರಿ ಮಾಡಬೇಕು?
    ಪ್ರತಿದಿನ ಬೆಳಗ್ಗೆ ಇದನ್ನು ಪುನರಾವರ್ತಿಸಿ. ಮಲಗುವ ಮುನ್ನ ಕೂಡ ಮಾಡಬಹುದು.

    ಒಂದು ಕಪ್ ಚಹಾದಲ್ಲಿದೆ ಆರೋಗ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts