More

    ರಾಜಸ್ಥಾನ ರಾಜಕೀಯ ಆಖಾಡಕ್ಕಿಳಿದ ಗೃಹ ಸಚಿವಾಲಯ; ಫೋನ್ ಟ್ಯಾಪಿಂಗ್​ ವಿವರಣೆ ನೀಡಲು ಸೂಚನೆ

    ಜೈಪುರ: ರಾಜಸ್ಥಾನ ಕಾಂಗ್ರೆಸ್​ ಸರ್ಕಾರ ಎರಡು ಬಣಗಳಾಗಿದೆ. ಅಶೋಕ್​​ ಗೆಹ್ಲೋಟ್ ಮತ್ತು ಸಚಿನ್​ ಪೈಲಟ್​ ಬಣಗಳು ಹೋಟೆಲ್​ ಸೇರಿವೆ. ಬಿಜೆಪಿ ಶಾಸಕರ ಕುದುರೆ ವ್ಯಾಪಾರ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸುತ್ತಿದ್ದರೆ, ಇತ್ತ ಕಾಂಗ್ರೆಸ್​ ಸರ್ಕಾರ ಬಿಜೆಪಿ ಮುಖಂಡರ, ಶಾಸಕರ ಫೋನ್​ ಟ್ಯಾಪಿಂಗ್ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
    ಬಿಜೆಪಿ ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕೆಡವಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು ಅದಕ್ಕೆ ಪುಷ್ಟಿ ನೀಡುವಂತಹ ಎರಡು ಆಡಿಯೋ ಕ್ಲಿಪ್​ಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

    ಇದೀಗ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸಂಪೂರ್ಣ ವರದಿ ಕೇಳಿದೆ. ಫೋನ್​ ಟ್ಯಾಪಿಂಗ್​ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್​ ಸರ್ಕಾರಕ್ಕೆ ತಿಳಿಸಿದೆ. ಆಡಿಯೋ ಕ್ಲಿಪ್​, ಎಫ್​ಐಆರ್​ ಎಲ್ಲದರ ಬಗ್ಗೆಯೂ ಸಮಗ್ರ ವಿವರಣೆ ನೀಡಲು ಸೂಚಿಸಿದೆ.

    ಈ ಎರಡು ಆಡಿಯೋ ಕ್ಲಿಪ್​ ಹೊರಬೀಳುತ್ತಿದ್ದಂತೆ ಶಾಸಕರಾದ ಬನ್ವರ್​ಲಾಲ್​ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್​ ಎಂಬುವರನ್ನು ಕಾಂಗ್ರೆಸ್​, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಿದೆ. ಈ ಇಬ್ಬರು ಶಾಸಕರು ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರೊಂದಿಗೆ ಸೇರಿ, ಅಶೋಕ್​ ಗೆಹ್ಲೊಟ್​ ಸರ್ಕಾರ ಉರುಳಿಸುವ ಬಗ್ಗೆ ಮಾತನಾಡಿದ್ದು, ಆಡಿಯೋ ಕ್ಲಿಪ್​​ನಿಂದ ಬೆಳಕಿಗೆ ಬಂದಿದೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟನೆ ಗೊಳಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇದನ್ನೂ ಓದಿ: ಭಾರತದ ಆಗಸದಲ್ಲಿ ಇಂದು ರಾತ್ರಿ ಖಗೋಳ ಚಮತ್ಕಾರ; ಒಂದೇ ಗೆರೆಯಲ್ಲಿ ಚಂದ್ರ ಮತ್ತಿತರ ಐದು ಗ್ರಹಗಳ ದರ್ಶನ

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಜೇಂದ್ರ ಸಿಂಗ್ ಶೇಖಾವತ್​ ಅವರು, ಆಡಿಯೋ ಕ್ಲಿಪ್​ನಲ್ಲಿರುವ ಧ್ವನಿ ತನ್ನದಲ್ಲ. ಈ ಬಗ್ಗೆ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.

    ಹಾಗೇ ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ಬಿಜೆಪಿ ಮುಖಂಡರ ಫೋನ್​ ಟ್ಯಾಪಿಂಗ್ ಮಾಡುತ್ತಿದೆ. ಈ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಮುಖಂಡರು ಬಲವಾಗಿ ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗೃಹ ಸಚಿವಾಲಯ ವರದಿ ಕೇಳಿದೆ. (ಏಜೆನ್ಸೀಸ್​)

    ಕೋವಿಡ್-19ರಿಂದ ಗುಣಮುಖರಾಗುವಂತೆ ಹಾರೈಸಿ ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ಡಬ್ಲ್ಯುಡಬ್ಲ್ಯುಇ ದಿಗ್ಗಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts