More

    ಭಾರೀ ಮಳೆಗೆ ಹರಿಯಾಣದ ರಸ್ತೆಗಳು ಜಲಾವೃತ; ಬೋಟ್​​ ಮೂಲಕ ಪರಿಸ್ಥಿತಿ ವೀಕ್ಷಿಸಿದ ಗೃಹ ಸಚಿವ

    ಹರಿಯಾಣ: ನಿರಂತರ ಸುರಿದ ಮಳೆಗೆ ಹರಿಯಾಣದ ನಗರ ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದು, ಗೃಹ ಸಚಿವ ಅನಿಲ್ ವಿಜ್ ಪರಿಸ್ಥಿತಿಯನ್ನು ತಿಳಿಯಲು ಸ್ಥಳಕ್ಕೆ ದೋಣಿಯಲ್ಲಿ ತೆರಳಿ ಜನರ ಸಂಕಷ್ಟವನ್ನು ಆಲಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಪರಾಧ ಸಂಖ್ಯೆ ಹೆಚ್ಚಳ: ನಳಿನ ಕುಮಾರ ಕಟೀಲ ಟೀಕೆ

    ಕಳೆದ ಮೂರು ದಿನಗಳಿಂದ ಹರಿಯಾಣದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯೂ ಮಂಗಳವಾರ ಕೊಂಚ ಇಳಿಮುಖ ಕಂಡಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಅನಿಲ್ ವಿಜ್, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿರ್ಸಾದ ಶಾಸ್ತ್ರಿ ಕಾಲೋನಿ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ ಬೋಟ್ ಪ್ರಯಾಣ​​ ಆಯ್ಕೆ ಮಾಡಿಕೊಂಡರು. ಈ ದೃಶ್ಯವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

    ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಪ್ರವಾಹದ ಭೀತಿಯನ್ನು ಸೃಷ್ಟಿಸಿದೆ. ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಇಲ್ಲಿಯವರೆಗೂ 9 ಜನರು ಮಳೆಯ ಆರ್ಭಟಕ್ಕೆ ಮೃತರಾಗಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

    ಜೈಲಿನಿಂದ ಹೊರಬರುತ್ತಿದ್ದಂತೆಯೇ ಹೆಂಡತಿಯ ಕತ್ತು ಸೀಳಿದ ಗಂಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts