More

    ಕೋವಿಡ್‌ ನಿಯಮ ಉಲ್ಲಂಘನೆ ಪತ್ತೆಗೆ ಮಂಗಳೂರಿನಲ್ಲೂ ಮಾರ್ಷಲ್‌ ಬಳಕೆ

    ಮಂಗಳೂರು: ಮಂಗಳೂರಿನಲ್ಲೂ ಕೋವಿಡ್ ಮಾರ್ಗಸೂಚಿ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರ್ಷಲ್‌ಗಳ ಮಾದರಿಯಲ್ಲೇ ಗೃಹರಕ್ಷಕರನ್ನು ಬಳಕೆಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
    ತೀವ್ರವಾಗಿ ಕೋವಿಡ್ ಹಬ್ಬಬಹುದಾದ ಸಾಧ್ಯತೆ ಇರುವ ಜಿಲ್ಲೆಗಳಲ್ಲೊಂದಾಗಿರುವ ದಕ್ಷಿಣ ಕನ್ನಡದಲ್ಲಿ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ, ನಡೆಯುವಂತಹ ಕಾರ್ಯಕ್ರಮಗಳ ಮೇಲೆ ಇನ್ನು ಮುಂದೆ ಗೃಹರಕ್ಷಕರು ಮಾ.19ರಿಂದಲೇ ನಿಗಾ ಇರಿಸಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ, ಬಸ್, ಮಾಲ್ ಮುಂತಾದೆಡೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವುದು ಅಲ್ಲದೆ ನಿಯಮ ಉಲ್ಲಂಘಿಸಿದರೆ ದಂಡ ಹಾಕುವ ಬಗ್ಗೆಯೂ ಯೋಜಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
    ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಎರಡನೇ ಡೋಸೇಜ್ ಹಾಕಿಸಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
    ಆರಂಭದಲ್ಲಿ ಮಂಗಳೂರಿನಲ್ಲಿ ಈ ವಿಧಾನ ಅನುಸರಿಸುತ್ತೇವೆ, ಬಳಿಕ ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸಲಾಗುವುದು.ಜನರಿಗೆ 2020ರಲ್ಲಿ ಕೋವಿಡ್ ಬಗ್ಗೆ ಭಯವಿತ್ತು, ಆದರೆ ಈಗ ಅದೆಲ್ಲಾ ಹೋಗಿದೆ, ಹಾಗಾಗಿ ನಿರ್ಲಕ್ಷೃ ಜಾಸ್ತಿ ಆಗುವ ಕಾರಣ ಕೋವಿಡ್ ಮತ್ತೆ ಹೆಚ್ಚಾಗುವ ಭೀತಿ ಎದುರಾಗಿದೆ, ಹಾಗಾಗಿ ನಿಯಂತ್ರಣ ಕ್ರಮಗಳು ಅನಿವಾರ್ಯ ಎಂದರು.
    ನಾನೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹರಕ್ಷಕರು ಸೇರಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
    ಕಲ್ಯಾಣಮಂಟಪ, ಸಮಾವೇಶ ನಡೆಯುವ ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು, ಸೂಚನೆಯನ್ನು ಧಿಕ್ಕರಿಸಿದರೆ ಅಂತಹವರ ವಿರುದ್ಧ ದಂಡ ವಿಧಿಸುವುದು ಅನಿವಾರ್ಯ ಎಂದರು.
    *ದೇವಸ್ಥಾನ ಸಿಬ್ಬಂದಿಗೂ ಲಸಿಕೆ
    ದೇವಸ್ಥಾನಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಸಿಬ್ಬಂದಿಗಳೂ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಅವರನ್ನೂ ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ಹಾಕಿಸಲಾಗುವುದು. 500 ದೇವಸ್ಥಾನದ 1000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಲಸಿಕೆ ಹಾಕಿಸಲಾಗುವುದು ಎಂದರು.
    ಒಟ್ಟಾಗಿ ಹೆಚ್ಚು ಮಂದಿ ಹಿರಿಯ ನಾಗರಿಕರು ಇದ್ದಲ್ಲಿ, ಅವರನ್ನು ಕೆಎಸ್‌ಆರ್‌ಟಿಸಿ ಬಸ್ ಮಾಡಿ ಕರೆತಂದು ಲಸಿಕೆ ಹಾಕಿಸುವುದಕ್ಕೂ ಅವಕಾಶಗಳಿವೆ ಎಂದರು.

    ಕೋವಿಡ್‌ ನಿಯಮ ಉಲ್ಲಂಘನೆ ಪತ್ತೆಗೆ ಮಂಗಳೂರಿನಲ್ಲೂ ಮಾರ್ಷಲ್‌ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts