More

    ಮನೆ ಮುಂದೆ ಕಟ್ಟಿದ್ದ 1 ಲಕ್ಷ ರೂ. ಮೌಲ್ಯದ 2 ಎಮ್ಮೆ ಕಳ್ಳತನ

    ಹಾನಗಲ್ಲ: ಶೆಡ್‌ನಲ್ಲಿ ಕಟ್ಟಿದ್ದ 1 ಲಕ್ಷ ರೂ. ಮೌಲ್ಯದ ಎರಡು ಎಮ್ಮೆಗಳನ್ನು ಯಾರೋ ಕಳ್ಳರು ದೋಚಿಕೊಂಡು ಹೋದ ಘಟನೆ ತಾಲೂಕಿನ ಮಲಗುಂದ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
    ಗ್ರಾಮದ ಫಕ್ಕೀರಪ್ಪ ದೇವಿಂದ್ರಪ್ಪ ಪೂಜಾರ (40) ಎಂಬುವರ ಎಮ್ಮೆ ಕಳ್ಳತನವಾಗಿರುವುದು.
    ಇವರು ಮನೆಯ ಎದುರಿನ ಶೆಡ್‌ನಲ್ಲಿ ಎಮ್ಮೆಗಳನ್ನು ಕಟ್ಟಿದ್ದರು. ಯಾರೋ ಕಳ್ಳತನ ಟಾಟಾ ಎಂಟ್ರಾ ವಾಹನದಲ್ಲಿ ಬಂದು ಎಮ್ಮೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts