More

    ಹೊರ ಜಿಲ್ಲೆಯವರ ಮೇಲಿಡಿ ನಿಗಾ

    ಹೊಳಲ್ಕೆರೆ: ಪಟ್ಟಣದ ಗಡಿಯಲ್ಲಿ ಬ್ಯಾರಿಕೇಡ್ ಹಾಕಿ, ಹೊರ ಜಿಲ್ಲೆಗಳಿಂದ ಬರುವವರನ್ನು ಪತ್ತೆ ಹಚ್ಚಿ ತಾಲೂಕು ವೈದ್ಯಾಧಿಕಾರಿಗಳ ಗಮನ ತರಬೇಕೆಂದು ತಹಸೀಲ್ದಾರ್ ಕೆ.ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಕಚೇರಿಯಲ್ಲಿ ಪಪಂ ಸದಸ್ಯರಿಗೆ ಹಮ್ಮಿಕೊಂಡಿದ್ದ ಕರೊನಾ ವೈರಸ್ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿಯಾಗಿದೆ.

    ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮನೆಯಲ್ಲೇ ಇರುವ ಮೂಲಕ ಕರೊನಾ ವೈರಸ್ ಹರಡದಿರಲು ಸಹಕರಿಸಬೇಕು. ಇಲ್ಲದಿದ್ದಲ್ಲಿ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ವಾಹನಗಳ ಸಂಚಾರ, ಅಂಗಡಿ ಮುಂಗಟ್ಟು ಸ್ಥಗಿತವಾಗಿವೆ. ಜನರು ಗುಂಪುಗಳಲ್ಲಿ ಸೇರದಂತೆ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇವಸ್ಥಾನಗಳಿಗೆ ಹೆಚ್ಚಿನ ಜನರು ಬರದಂತೆ ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಎಚ್ಚರ ವಹಿಸಬೇಕು ಎಂದರು.

    ಮನೆಗಳಲ್ಲಿ ಯಾರಾದರೂ ಮೃತಪಟ್ಟರೆ ಅದಕ್ಕೆ ಕಾರಣ ತಿಳಿಯಬೇಕು. ಅನಗತ್ಯವಾಗಿ ಬೀದಿಗಿಳಿಯುವವರಿಗೆ ಜಾಗೃತಿ ಮೂಡಿಸಬೇಕು. ಚರಂಡಿಗಳ ಸ್ವಚ್ಛತೆಗೆ ಔಷಧ ಸಿಂಪಡಿಸಲು ಹಾಗೂ ನಿರಾಶ್ರಿತರು-ಭಿಕ್ಷುಕರನ್ನು ಗುರುತಿಸಿ ಅವರ ಸೇವೆಗೆ ಸ್ವಯಂಸೇವಕರನ್ನು ಕಳುಹಿಸುವಂತೆ ಸದಸ್ಯರಿಗೆ ಹೇಳಿದರು.

    ಸಿಪಿಐ ವೀರೇಶ್, ಪಪಂ ಮುಖ್ಯಾಧಿಕಾರಿ ವಾಸಿಂ, ಟಿಎಚ್‌ಒ ಡಾ.ಜಯಸಿಂಹ, ಪ.ಪಂ. ಸದಸ್ಯರಾದ ಕೆ.ಸಿ.ರಮೇಶ್, ಮಲ್ಲಿಕಾರ್ಜುನ, ವಿಜಯ, ಮುರುಗೇಶ್, ಸಜೀಲ್, ಮನ್ಸೂರ್ ಅಲಿ, ಬಿ.ಎಸ್.ರುದ್ರಪ್ಪ, ಬಸವರಾಜ, ಕ.ಸಾ.ಪ ಅಧ್ಯಕ್ಷ ಲೋಕೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts