More

    ಆಂತರಿಕ ಶತ್ರುಗಳತ್ತ ಇರಲಿ ಎಚ್ಚರ

    ಹೊಳಲ್ಕೆರೆ: ಆಂತರಿಕ ಶತ್ರುಗಳ ನಡೆ-ನುಡಿ ಕುರಿತು ಸದಾ ಜಾಗ್ರತರಾಗಬೇಕು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.

    ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಸ್ತು, ಶಾಂತಿ, ಭ್ರಾತೃತ್ವ ರೂಢಿಸಿಕೊಂಡಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದರು.

    ಗಣ ಎಂದರೆ ಒಂದು ಗುಂಪು. ಅವಗುಣಗಳನ್ನು ತೊಡೆದುಹಾಕಿದಾಗ ಮಾತ್ರ ನಾವೆಲ್ಲರೂ ಒಂದು ಒಳ್ಳೆಯ ಗಣವಾಗುತೇವೆ. ಮಾನಸಿಕ ತುಮುಲಗಳು ಹಾಗೂ ನಮ್ಮ ಜತೆಯಲ್ಲಿರುವ ಕೆಟ್ಟ ವ್ಯಕ್ತಿಗಳೇ ನಮ್ಮ ಆಂತರಿಕ ಶತ್ರುಗಳು ಎಂದು ತಿಳಿಸಿದರು.

    ಕಾಮ, ಕ್ರೋಧ, ಮದ, ಮತ್ಸರಗಳ ಕುರಿತು ಸದಾ ಜಾಗ್ರತೆ ಇರಬೇಕು. ಜೀವನದಲ್ಲಿ ವಿವೇಚನೆಯಿಂದ ವರ್ತಿಸಿದಾಗ ಮಾನವೀಯ ಗುಣ ಬೆಳೆಸಿಕೊಂಡು, ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

    ದೆಹಲಿ ಮಾದರಿಯ ಗಣರಾಜ್ಯೋತ್ಸವದ ಪಥಸಂಚಲನ ನಡೆಯಿತು. ಗುರುಕುಲ ವಿದ್ಯಾರ್ಥಿಗಳು ಹಾಗೂ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.

    ಎನ್‌ಸಿಸಿ ಅಧಿಕಾರಿ ಆರ್.ಬಿ.ಹಾರೋಮಠ್ ನೇತೃತ್ವದಲ್ಲಿ 42 ಪ್ಲಟೂನ್‌ಗಳಿಂದ ಪಥ ಸಂಚಲನೆ ನಡೆಯಿತು. ಸುದೀರ್ಘ ಸೇವೆ ಸಲ್ಲಿಸಿದ ರಾಮಪ್ಪ, ಶಿವಮೂರ್ತಿ ಅವರನ್ನು ಸನ್ಮಾನಿಸಲಾಯಿತು.

    ಆಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಪ್ರಾಚಾರ್ಯರಾದ ಟಿ.ವೆಂಕಟೇಶ್, ಡಾ.ಎಸ್.ನಾಗರಾಜ, ಡಾ.ಜಿ.ಯು.ನಾಗರಾಜ್, ಜಿ.ಎಸ್.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts