More

    ಶರಣರ ತತ್ವ ಪಾಲನೆಯಿಂದ ನೆಮ್ಮದಿ

    ಹೊಳಲ್ಕೆರೆ: ಶರಣರ ತತ್ವಪಾಲನೆಯಿಂದ ಮಾನಸಿಕ ಸಂಸ್ಕಾರ ದೊರೆಯುತ್ತದೆ ಎಂದು ದಾವಣಗೆರೆ ಎ.ವಿ.ಕೆ ಕಾಲೇಜಿನ ಉಪನ್ಯಾಸಕಿ ಗೀತಾ ಬಸವರಾಜು ಹೇಳಿದರು.

    ತಾಲೂಕಿನ ಆರ್.ನುಲೇನೂರಿನ ನುಲಿಯ ಚಂದಯ್ಯ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕರ್ಮ ಯೋಗದಿಂದ ಶಿವಯೋಗ ಸಿದ್ಧಿ ಪಡೆದ ಸಿದ್ಧರಾಮೇಶ್ವರರ ಪ್ರತಿಯೊಂದು ವಚನವು ಬದುಕಿನ ಮೌಲ್ಯ ತಿಳಿಸುತ್ತವೆ ಎಂದರು.

    ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳಿಗೆ ವಚನಗಳು ದಿವ್ಯ ಔಷಧವಾಗಿವೆ. ಮುರಿದು ಹೋದ ಮನಸ್ಸುಗಳನ್ನು ಶರಣರು ಒಂದುಗೂಡಿಸಿದರು. ನಾಲ್ಕು ಗೋಡೆ ಮಧ್ಯೆಯೇ ಜೀವಿಸುತ್ತಿದ್ದ ಮಹಿಳೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಬಸವಾದಿ ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಬಸವತತ್ವ ಚಿಂತಕ ಜಿ.ಎನ್.ಬಸವರಾಜಪ್ಪ ಮಾತನಾಡಿ, ಶರಣರ ಸತ್ಯ ಶುದ್ಧ ಕಾಯಕ ಸಾರ್ವತ್ರಿಕವಾಗಿತ್ತು. ಭೌತಿಕ ಕೆರೆ ನಿರ್ಮಾಣದ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದ ಸಿದ್ದರಾಮೇಶ್ವರರು ಅಲ್ಲಮ ಪ್ರಭುವಿನ ಮಾರ್ಗದರ್ಶನದಂತೆ ಆಧ್ಯಾತ್ಮಿಕ ಕೆರೆ ನಿರ್ಮಾಣದಲ್ಲಿ ಶಿವಯೋಗ ಸಿದ್ಧಿ ಪಡೆದರು ಎಂದರು.

    ನಿವೃತ್ತ ಶಿಕ್ಷಕ ಜಿ.ರಾಮಪ್ಪ ಮಾತನಾಡಿದರು. ಶಿಕ್ಷಕಿ ಜಿ.ಬಿ.ವಿದ್ಯಾವತಿ, ನಿವೃತ್ತ ಶಿಕ್ಷಕರಾದ ಬಿ.ನಂಜಪ್ಪ, ಮುರುಗೇಂದ್ರಪ್ಪ, ಭುವನೇಶ್ವರಿ, ಕುಸುಮಾ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts