More

    ಅರ್ಹರೆಲ್ಲರಿಗೂ ಪಡಿತರ ನೀಡಿ

    ಹೊಳಲ್ಕೆರೆ: ಕೇವಲ ಐದುನೂರು ಜನಕ್ಕೆ ಮಾತ್ರ ಎಂಬ ನೀತಿ ಕೈಬಿಟ್ಟು ಇಂದಿರಾ ಕ್ಯಾಂಟೀನ್‌ಗೆ ಬರುವ ಎಲ್ಲರಿಗೂ ಮೂರು ಹೊತ್ತು ಊಟ, ತಿಂಡಿ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ, ಪಪಂ ಮುಖ್ಯಾಧಿಕಾರಿ ವಾಸೀಂ ಅವರಿಗೆ ಸೂಚಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ವೈರಸ್ ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮ ಜರುಗಿಸಬೇಕು. 14ನೇ ಹಣಕಾಸು ಯೋಜನೆ ಅನುದಾನ ಬಳಸಿ ಹಳ್ಳಿಗಳ ಶುಚಿತ್ವ ಕಾಪಾಡಬೇಕು. ಈ ಹಣ ಬಳಸುವ ಬಗ್ಗೆ ತಾಪಂ ಇಒಗೆ ತಿಳಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

    ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವವರು, ಅಪಘಾತಕ್ಕೀಡಾದವರು, ತಾಯಿ ಮತ್ತು ಮಕ್ಕಳಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿ ಪ್ರತಿ ವಾರ್ಡ್‌ಗೂ ಒಬ್ಬ ನರ್ಸ್ ನೇಮಿಸಬೇಕು ಎಂದು ಟಿಎಚ್‌ಒ ಡಾ.ಜಯಸಿಂಹ ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಕೃಷ್ಣಮೂರ್ತಿ ಅವರಿಗೆ ತಿಳಿಸಿದರು.

    ನ್ಯಾಯಬೆಲೆ ಅಂಗಡಿಗಳಲ್ಲಿ ನಮಗೆ ಪಡಿತರ ದೊರೆತಿಲ್ಲವೆಂಬ ದೂರು ಯಾರಿಂದಲೂ ಬರಬಾರದು. ಅರ್ಹರೆಲ್ಲರಿಗೂ ಧಾನ್ಯ ವಿತರಿಸಲು ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ್ ಕೆ.ನಾಗರಾಜ್ ಅವರಿಗೆ ಸೂಚಿಸಿದರು.

    ಗುಪ್ತಚರ ದಳದ ನೆರವು ಪಡೆದು ಪಟ್ಟಣಕ್ಕೆ ಯಾರು, ಯಾವಾಗ, ಎಲ್ಲಿಂದ ಬಂದಿದ್ದಾರೆ ಎಂಬ ಮಾಹಿತಿ ಪಡೆದು ಅಗತ್ಯ ಇದ್ದರೆ ತಪಾಸಣೆ ನಡೆಸಬೇಕು ಎಂದು ಸಿಪಿಐ ರವೀಶ್ ಅವರಿಗೆ ತಿಳಿಸಿದರು. ಪಿಎಸ್‌ಐ ಸ್ವಾತಿ, ಎಇಇ ಮಹಾಬಲೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts