More

    ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ

    ಹೊಳಲ್ಕೆರೆ: ಹೊರಕೇರಿದೇವರಪುರದಲ್ಲಿ ಸೋಮವಾರ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ನಡೆದ ಬಳಿಕ ಮಂಗಳವಾರ ಸ್ವಾಮಿಯ ರಥೋತ್ಸವ ನಡೆಯಿತು.

    ಬೆಳಗಿನ ಜಾವ 4-30ಕ್ಕೆ ಶುರುವಾದ ರಥೋತ್ಸವ ದೇವಾಲಯ ಎದುರಿನ ರಸ್ತೆಯಲ್ಲಿ ಸಾಗಿ ಬೆಳಗ್ಗೆ 7 ರ ಹೊತ್ತಿಗೆ ರಥಮಂಟಪದ ಬಳಿಗೆ ತಲುಪಿತು.

    ಈ ವೇಳೆ ಹಾಜರಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮಿಗೆ ದೊಡ್ಡೆಡೆ ಸೇವೆ ಜರುಗಿತು. ಬೆಳಗ್ಗೆ ಭೂತ ಬಲಿ, ಧೂಳೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಚೌಕಿ ಉತ್ಸವ ಜರುಗಿತು. ಭಕ್ತರಿಗೆ ಮೊಸರನ್ನ, ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

    ಬುಧವಾರದಂದು ರಜತ ಪೀಠೋತ್ಸವ,ಉಯ್ಯಲೋತ್ಸವ,ಚೌಕಿ ಉತ್ಸವ,ಪಲ್ಲಕ್ಕಿ ಉತ್ಸವ, ರಾತ್ರಿ ಅಶ್ವ ಶಾಹನೋತ್ಸವ ಪಾರ‌್ವಟೋತ್ಸವ,ಅವಭೃತ ಪಲ್ಲಕ್ಕಿ ಉತ್ಸವ,ನವಿಲೋತ್ಸವ ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿವೆ.

    ಇಂದು ಹೂವಿನಪಪಲ್ಲಕ್ಕಿ ಉತ್ಸವ: ಹೊರಕೇರಿ ದೇವರಪುರದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವಕ್ಕೆ ಬುಧವಾರ ರಾತ್ರಿ ನಡೆಯಲಿದ್ದು ಭರದಿಂದ ಸಿದ್ಧತೆಗಳು ನಡೆದಿವೆ.

    ಮಲ್ಲಿಗೆ, ಸೇವಂತಿಗೆ, ಸುಗಂಧರಾಜ ಸೇರಿ ವಿವಿಧ ಹೂಗಳಿಂದ ಪಲ್ಲಕ್ಕಿಯನ್ನು ಅಲಂಕರಿಸಿ ಸ್ವಾಮಿಯ ನ್ನು ಕೂರಿಸಿ ಕಲ್ಯಾಣಿ ಸುತ್ತು ಹಾಕಿ ದೇವಸ್ಥಾನಕ್ಕೆ ಮರಳಲಾಗುತ್ತದೆ.

    ಬುಧವಾರ ರಾತ್ರಿ 10ಕ್ಕೆ ಶುರುವಾಗಿ ಗುರುವಾರ ಬೆಳಗ್ಗೆ 6 ರವರೆಗೆ ನಡೆಯುವ ಹೂವಿನ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಸುತ್ತ 33 ಹಳ್ಳಿಗಳಿಂದ ಜನಸಾಗರ ಸೇರುತ್ತದೆ.

    ಗುಡ್ಡಪ್ಳ ವಂಶಸ್ಥರು ಹೂವಿನಪಲ್ಲಕ್ಕಿ ಉತ್ಸವ ನಡೆಸಿಕೊಡುವರು. ಈ ವೇಳೆ ಆರ್ಕೇಸ್ಟ್ರಾ ಕೂಡ ವ್ಯವಸ್ಥೆ ಮಾಡಲಾಗಿರುತ್ತದೆ. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಕೃಪಗೆ ಪಾತ್ರರಾಗುವಂತೆ ಗುಡ್ಡಪ್ಳ ವಂಶದ ಜಿ.ಶೇಷಾದ್ರಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts