More

    ಕ್ರಿಕೆಟ್ ತಂಡಗಳು ಸತತ 2 ಟೂರ್ನಿ ಆಡುವಾಗ ಹಾಕಿ ತಂಡಗಳಿಗೆ ಯಾಕೆ ಸಾಧ್ಯವಿಲ್ಲ? ಕ್ರೀಡಾ ಸಚಿವ ಗರಂ

    ನವದೆಹಲಿ: ಮುಂದಿನ ವರ್ಷದ ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಪಾಲ್ಗೊಳ್ಳುವುದಿಲ್ಲ ಎಂದು ಹಾಕಿ ಇಂಡಿಯಾ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ಕ್ರೀಡಾ ಒಕ್ಕೂಟವೊಂದು ಕೇಂದ್ರ ಸರ್ಕಾರದ ಜತೆಗೆ ಚರ್ಚಿಸಿದ ಬಳಿಕವಷ್ಟೇ ಇಂಥದ್ದೊಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ. ಏಕಪಕ್ಷೀಯವಾಗಿ ಇಂಥ ನಿರ್ಧಾರ ಕೈಗೊಳ್ಳುವಂತಿಲ್ಲ. ಒಲಿಂಪಿಕ್ಸ್ ಕ್ರೀಡೆಗಳಿಗೆ ಸರ್ಕಾರವೇ ಹೆಚ್ಚಿನ ಆರ್ಥಿಕ ನೆರವು ನೀಡುತ್ತದೆ. ಹೀಗಾಗಿ ದೇಶವನ್ನು ಪ್ರತಿನಿಧಿಸುವ ತಂಡದ ಬಗ್ಗೆ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಠಾಕೂರ್ ಹೇಳಿದ್ದಾರೆ.

    32 ದಿನಗಳ ಅಂತರದಲ್ಲಿ ಏಷ್ಯಾಡ್ ನಡೆಯುವುದರಿಂದ ಹಾಕಿ ಇಂಡಿಯಾ ಅದರತ್ತ ಗಮನಹರಿಸಲು ಬಯಸಿದ್ದರೂ, ಸತತ 2 ಕ್ರೀಡಾಕೂಟಗಳಲ್ಲಿ ಆಡಬಲ್ಲಂಥ ಹಾಕಿ ಪ್ರತಿಭೆಗಳು ದೇಶದಲ್ಲಿವೆ. ಕ್ರಿಕೆಟ್ ತಂಡ ಸತತ 2 ಟೂರ್ನಿ ಆಡಬಹುದಾದರೆ, ಹಾಕಿ ತಂಡಕ್ಕೆ ಯಾಕೆ ಅದು ಸಾಧ್ಯವಾಗದು ಎಂದು ಅನುರಾಗ್ ಪ್ರಶ್ನಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ 2022ರ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿದ್ದು, ಅದಾದ 32 ದಿನಗಳಲ್ಲೇ ಹಾಂಗ್‌ರೆೌ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10ರಿಂದ 25ರವರೆಗೆ ನಡೆಯಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಏಷ್ಯನ್ ಗೇಮ್ಸ್ ಮಹತ್ವದ್ದಾಗಿರುವ ಕಾರಣದಿಂದಲೂ ಹಾಕಿ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿತ್ತು.

    ಭಾರತದಲ್ಲಿ ಈ ವರ್ಷ ನಡೆಯಲಿರುವ ಜೂನಿಯರ್ ಪುರುಷರ ವಿಶ್ವಕಪ್‌ನಿಂದ ಇಂಗ್ಲೆಂಡ್ ತಂಡ ಹಿಂದೆ ಸರಿದ ಬೆನ್ನಲ್ಲೇ ಅದಕ್ಕೆ ಪ್ರತೀಕಾರವಾಗಿ ಹಾಕಿ ಇಂಡಿಯಾ ಕೂಡ, ಬ್ರಿಟನ್ ಕರೊನಾದಿಂದ ಅತಿಹೆಚ್ಚು ತೊಂದರೆಗೊಳಗಾಗಿರುವ ದೇಶವಾಗಿರುವ ಕಾರಣಕ್ಕೆ ಕಾಮನ್ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿತ್ತು. ಇದಲ್ಲದೆ ಭಾರತದ ಕೋವಿಡ್ ಲಸಿಕೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲು ಬ್ರಿಟನ್ ಸರ್ಕಾರ ನಿರಾಕರಿಸಿದ್ದು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತದ ಎಲ್ಲ ಸದಸ್ಯರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ, 10 ದಿನಗಳ ಕಾಲ ಹಾರ್ಡ್ ಕ್ವಾರಂಟೈನ್‌ನಲ್ಲಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್-19 ಕಳವಳ ಮತ್ತು ಭಾರತದ ಸ್ಪರ್ಧಿಗಳಿಗೆ ಬ್ರಿಟನ್ ವಿಧಿಸಿರುವ ತಾರತಮ್ಯದ ಕ್ವಾರಂಟೈನ್ ನಿಯಮಾವಳಿಗಳು ಕಾರಣವಾಗಿವೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಜ್ಞಾನೇಂದ್ರೊ ನಿಂಗೊಂಬಮ್ ತಿಳಿಸಿದ್ದರು.

    ಟಿ20 ವಿಶ್ವಕಪ್‌ ಬಹುಮಾನ ಮೊತ್ತ ಘೋಷಿಸಿದ ಐಸಿಸಿ- ಯಾರ ತೆಕ್ಕೆಗೆ ಬೀಳಲಿದೆ 12 ಕೋಟಿ ರೂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts