More

    ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಗೆ ಎಚ್ಚರಿಕೆ ಸಂದೇಶ ರವಾನಿಸಿದ ಕ್ರೀಡಾ ಸಚಿವ ಅನುರಾಗ್​ ಠಾಕೂರ್​

    ನವದೆಹಲಿ: ಟೀಮ್​ ಇಂಡಿಯಾದ ಇಬ್ಬರು ನಾಯಕರಾದ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ನಡುವಿನ ವೈಮನಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್, ಕ್ರೀಡೆಗಿಂತ ಯಾರು ದೊಡ್ಡವರಲ್ಲ ಎನ್ನುವ ಮೂಲಕ ಇಬ್ಬರ ಹೆಸರೇಳದೇ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದು, ಸಂಬಂಧಪಟ್ಟ ಒಕ್ಕೂಟ ಅಥವಾ ಸಂಘಗಳು ಈ ಬಗ್ಗೆ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ಕ್ರೀಡೆಯೇ ಸರ್ವಶ್ರೇಷ್ಠ ಮತ್ತು ಕ್ರೀಡೆಗಿಂತ ಯಾರೂ ದೊಡ್ಡವರಲ್ಲ. ಯಾವ ಆಟದಲ್ಲಿ, ಆಟಗಾರರ ನಡುವೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಮಾಹಿತಿ ಕೊಡಲಾಗದು. ಇದು ಸಂಬಂಧಪಟ್ಟ ಒಕ್ಕೂಟ ಅಥವಾ ಸಂಘಗಳ ಕೆಲಸವಾಗಿದೆ. ಹೀಗಾಗಿ ಅವರು ಮಾಹಿತಿ ನೀಡಿದರೆ ಉತ್ತಮ ಎಂದು ಅನುರಾಗ್​ ಠಾಕೂರ್​ ತಿಳಿಸಿದ್ದಾರೆ.

    ವಿರಾಟ್​ ಕೊಹ್ಲಿ ಅವರನ್ನು ಏಕದಿನ ಮತ್ತು ಟಿ20 ಮಾದರಿ ಪಂದ್ಯಗಳ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ರೋಹಿತ್​ ಶರ್ಮರನ್ನು ಬಿಸಿಸಿಐ ಆಯ್ಕೆ ಮಾಡಿದ ಬಳಿಕ ಇಬ್ಬರು ಆಟಗಾರರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.

    ಏಕದಿನ ತಂಡದ ಹೊಸ ನಾಯಕ ರೋಹಿತ್ ಶರ್ಮ ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ, ಏಕದಿನ ತಂಡದ ನಿರ್ಗಮನ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವರದಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಈ ನಡೆ ತೋರಿಸಿಕೊಡುತ್ತಿದೆ. ರೋಹಿತ್-ವಿರಾಟ್ ನಡುವೆ ಮನಸ್ತಾಪವಿಲ್ಲ ಎಂದು ಬಿಸಿಸಿಐ ವಲಯದಿಂದ ಪದೇಪದೆ ಸ್ಪಷ್ಟನೆಗಳು ಬರುತ್ತಿದ್ದರೂ, ಒಳಗೆ ಏನೋ ನಡೆಯುತ್ತಿದೆ ಎಂಬ ಅನುಮಾನವನ್ನು ಈ ಬೆಳವಣಿಗೆ ಮೂಡಿಸುತ್ತಿದೆ. ಪ್ರವಾಸದ ಎರಡೂ ಸರಣಿಗಳಲ್ಲಿ ಟೆಸ್ಟ್ ಮತ್ತು ಸೀಮಿತ ಓವರ್ ತಂಡದ ನಾಯಕರು ಜತೆಯಾಗಿ ಆಡುವ ಪ್ರಸಂಗವೇ ಎದುರಾಗುತ್ತಿಲ್ಲ. ಇದು ಇಬ್ಬರ ನಡುವೆ ಭಿನ್ನಾಭಿಪ್ರಾಯ ಎದ್ದಿರುವ ಸುಳಿವಿನಂತೆ ಕಾಣಿಸುತ್ತಿದೆ. ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಬಣಗಳೂ ಸೃಷ್ಟಿಯಾಗಿರುವುದೇ ಎಂಬ ಅನುಮಾನಗಳೂ ಮೂಡಿವೆ.

    ಕೊಹ್ಲಿ-ರೋಹಿತ್ ಭಿನ್ನಮತ ಮೊದಲಲ್ಲ!
    ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದೇ ಆದರೆ ಇದು ಮೊದಲೇನಲ್ಲ. ಕಳೆದ 4 ವರ್ಷಗಳಿಂದ ಆಗಾಗ ಇವರಿಬ್ಬರ ಭಿನ್ನಾಭಿಪ್ರಾಯಗಳ ಸುದ್ದಿಗಳು ಬರುತ್ತಲೇ ಇವೆ. ಇದೇ ಕಾರಣಕ್ಕಾಗಿ ಹಿಂದಿನ ಕೋಚ್ ರವಿಶಾಸಿ ಇಬ್ಬರನ್ನೂ ಒಟ್ಟಿಗೆ ಕುಳಿತುಕೊಂಡು ಮನಬಿಚ್ಚಿ ಮಾತನಾಡುವಂತೆ ಮಾಡಿದ್ದರು. ಬಳಿಕ ಪರಸ್ಪರ ಉತ್ತಮ ಸ್ನೇಹಿತರಾಗಿದ್ದರು ಎನ್ನಲಾಗಿತ್ತು. ಆದರೆ ಇದೀಗ ರಾಹುಲ್ ದ್ರಾವಿಡ್ ಕೋಚ್ ಆದ ಬೆನ್ನಲ್ಲೇ ಮತ್ತೆ ಈ ತಲೆನೋವು ಮರುಕಳಿಸಿದಂತಿದೆ. (ಏಜೆನ್ಸೀಸ್​)

    ಟೀಮ್ ಇಂಡಿಯಾದಲ್ಲಿ ಮತ್ತೆ ಶುರುವಾಯಿತೇ ಸ್ಟಾರ್ ಕ್ರಿಕೆಟಿಗರ ವಾರ್?

    ಭಾರತೀಯ ಕ್ರಿಕೆಟ್‌ನಲ್ಲಿ ಈಗ ವಿರಾಟ್ ಕೊಹ್ಲಿ V/s ಸೌರವ್ ಗಂಗೂಲಿ!

    ಒಂದು ರೂಪಾಯಿಗೆ 100 ಎಂಬಿ ಡೇಟಾ!

    ಶೌರ್ಯ ದಿಟ್ಟತನದ ವಿಜಯ; ಪಶ್ಚಿಮ ಪಾಕಿಸ್ತಾನ ಎಸಗಿದ ಅನ್ಯಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts